ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ಹಳೇ ಬುಳ್ಳಾಪುರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳು, ಹಲ್ಲೆ ನಡೆಸಿ ಸುಮಾರು ₹71 ಸಾವಿರ ಮೌಲ್ಯದ ನಗದು ಮತ್ತು ಚಿನ್ನದ ಸರ ದೋಚಿರುವ (Robbed) ಘಟನೆ ನಡೆದಿದೆ.
ಕವಲಗುಂಡಿ ಗ್ರಾಮದ ನಿವಾಸಿ ಚಂದ್ರಶೇಖರ್ ಹಲ್ಲೆಗೊಳಗಾದವರು. ಹಳೇ ಬುಳ್ಳಾಪುರದ ಅಂಜನಪ್ಪ ಎಂಬುವವರನ್ನು ಭೇಟಿ ಮಾಡಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. 2ನೇ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ಐವರು ವ್ಯಕ್ತಿಗಳು ಚಂದ್ರಶೇಖರ್ ಅವರನ್ನು ತಡೆದು, ‘ಆಕಾಶ್ ಕರೆಯುತ್ತಿದ್ದಾನೆ ಬಾ’ ಎಂದು ಹೇಳಿ ವಾಗ್ವಾದ ನಡೆಸಿದ್ದಾರೆ.
ಚಂದ್ರಶೇಖರ್ ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮುಖಕ್ಕೆ ಗುದ್ದಿ ಹಲ್ಲುಗಳನ್ನು ಮುರಿದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಬಳಿಕ ಅವರ ಬಳಿಯಿದ್ದ ₹50,000 ನಗದು ಹಾಗೂ ₹21,000 ಮೌಲ್ಯದ 37 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಾಳು ಚಂದ್ರಶೇಖರ್ ಅವರು ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ರಾತ್ರೋರಾತ್ರಿ ಒಂದು ಡೇಂಜರ್ ಹಂಪ್ ಕಿತ್ತೊಗೆದ ಸ್ಥಳೀಯರು, ಎಲ್ಲಿ?
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್‌ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು






