ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 DECEMBER 2023
SHIMOGA : ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಗೃಹಣಿಯೊಬ್ಬರಿಗೆ 4.67 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಗೃಹಿಣಿಯೊಬ್ಬರು ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ವರ್ಕ್ ಫ್ರಂ ಹೋಮ್ ಜಾಹೀರಾತು ಗಮನಿಸಿದ್ದರು. ಅಪ್ಲೈ ಎಂದು ಕ್ಲಿಕ್ ಮಾಡಿದ್ದು, ಕೂಡಲೆ ಮೆಸೇಜ್ ಬಂದಿದೆ.
ಗೃಹಿಣಿಯನ್ನು ಟೆಲಿಗ್ರಾಂ ಆ್ಯಪ್‌ನ ಗ್ರೂಪ್‌ಗೆ ಸೇರಿಸಿಕೊಂಡು ಬ್ಯಾಂಕ್ ವಿವರ ಪಡೆಯಲಾಗಿತ್ತು. ಟೆಲಿಗ್ರಾಂನಲ್ಲಿ 20 ವಿಡಿಯೋ ಲಿಂಕ್‌ಗಳನ್ನು ಕಳುಹಿಸಿ ಲೈನ್ ಮಾಡಿ ಸ್ಕ್ರೀನ್ ಶಾಟ್ ಕಳುಹಿಸುವಂತೆ ಮಹಿಳೆಗೆ ಸೂಚಿಸಲಾಗಿತ್ತು. ಅದರಂತೆ ಸ್ಕ್ರಿನ್ ಶಾಟ್ ಕಳುಹಿಸಿದ್ದು ಮಹಿಳೆಯ ಬ್ಯಾಂಕ್ ಖಾತೆಗೆ 200 ರೂ. ಬಂದಿತ್ತು. ಬಳಿಕ ವಿವಿಧ ಟಾಸ್ಕ್‌ಗಳನ್ನು ನೀಡಿ ಮಹಿಳೆಯಿಂದ ವಿವಿಧ ಬ್ಯಾಂಕ್ ಖಾತೆಗೆ 4.67 ಲಕ್ಷ ರೂ. ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದರು.
ಕೊನೆಗೆ ಟಾಸ್ಕ್ ಪೂರೈಸಿದ ಹಣವನ್ನೂ ನೀಡದೆ, ಮಹಿಳೆ ಪಾವತಿಸಿದ್ದ ಲಕ್ಷಾಂತರ ರೂ. ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗೃಹಿಣಿಯು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಭದ್ರಾವತಿಯಲ್ಲಿ ಯುವಕನ ಬರ್ಬರ ಹತ್ಯೆ, ಮೂವರು ವಶಕ್ಕೆ, ಕೊಲೆಗೆ ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422