ಭದ್ರಾವತಿಯಲ್ಲಿ ಚಿರತೆ ಮೃತದೇಹ ಪತ್ತೆ, ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS, 27 JANUARY 2025
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಭದ್ರಾವತಿ : ಬಾರಂದೂರು ಸಮೀಪ ಭದ್ರಾ ನದಿ ಸೇತುವೆ ಬಳಿ ಚಿರತೆಯ (Leopard) ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ.

Leapord-at-Bhadravathi-Paper-town

ಸ್ಥಳೀಯರು ಚಿರತೆ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೆ ದೊಡ್ಡ ಸಂಖ್ಯೆಯ ಜನರು ಸೇತುವೆ ಬಳಿ ಜಮಾಯಿಸಿದ್ದರು.

ಸಾಯಿಸಿ, ತಂದು ಹಾಕಿರುವ ಶಂಕೆ

ಚಿರತೆಯನ್ನು ಸಾಯಿಸಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Leapord-at-Bhadravathi-Paper-town

ಈ ಭಾಗದಲ್ಲಿ ಚಿರತೆ ಓಡಾಟವಿಲ್ಲ. ಆದರೆ ಬೇರಡೆ ಇದನ್ನು ಕೊಂದು ಇಲ್ಲಿಗೆ ತಂದು ಹಾಕಿರುವ ಸಾಧ್ಯತೆ ಇದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ.

ಆಶೀಶ್‌ ರೆಡ್ಡಿ, ಡಿಸಿಎಫ್‌, ಭದ್ರಾವತಿ ವಿಭಾಗ

BLUE-LINE

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ATMನಿಂದ ಹಣ ದರೋಡೆಗೆ ಯತ್ನ, ಇಲ್ಲಿದೆ ಘಟನೆಯ ಕಂಪ್ಲೀಟ್‌ ಡಿಟೇಲ್‌

Leave a Comment