‘ಬಾಸ್‌ ಕರೆಸು’ ಅಂತಾ ಹೇಳಿ ದುಷ್ಕರ್ಮಿಗಳು ಮಚ್ಚಿನಿಂದ ಅಟ್ಯಾಕ್‌ ಮಾಡಿದ್ದಾರೆ, ಯಾರಿದು ಬಾಸ್‌?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಭದ್ರಾವತಿ: ಅನ್ವರ್‌ ಕಾಲೋನಿಯಲ್ಲಿ ವಿಶ್ವ ಅಲಿಯಸ್‌ ಮುದ್ದೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ‘ಬಾಸ್‌ ಕರೆಸು’ ಎಂದು ಸವಾಲು ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಗಂಭೀರ ಗಾಯಗೊಂಡಿರುವ ವಿಶ್ವನನ್ನು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಶ್ವನ ತಂದೆ ಮೃತ್ಯುಂಜಯ, ‘ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿ‍ಶ್ವನ ಮೇಲೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿದ್ದಾರೆ. ದಾಳಿ ವೇಳೆ ‘ನಿನ್ನ ಬಾಸ್‌ನ ಕರೆಸು, ಎಂಎಲ್‌ಎ ಮಗನನ್ನು ಕರೆಸು’ ಎಂದು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ದಾಳಿಯ ತೀವ್ರತೆಗೆ ವಿ‍ಶ್ವನ ತಲೆಗೆ ಗಂಭೀರ ಪೆಟ್ಟಾಗಿದೆʼ ಎಂದು ತಿಳಿಸಿದರು.

Attack-on-Bhadravathi-Vishwa-Aliyas-Mudde-in-Anwar-Colony

ಪೂಜೆ ಮುಗಿಸಿ ಟೀ ಕುಡಿಯಲು ಹೋಗಿದ್ದ

ವಿಶ್ವ ಎಂದಿನಂತೆ ಎಮ್ಮೆಗಳ ಹಾಲು ಕರೆದು ಡೈರಿಗೆ ಹಾಕಿ, ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ಕ್ಯಾಂಟೀನ್‌ಗೆ ಟೀ ಕುಡಿಯಲು ತೆರಳುತ್ತಿದ್ದ. ಆಗ ಈ ಘಟನೆ ನಡೆದಿದೆ. ಆಟೋ ಚಾಲಕರೊಬ್ಬರು ನನಗೆ ಕರೆ ಮಾಡಿ ಮಾಹಿತಿ ನೀಡಿದರು. ಆಗ ನಾವು ಆಸ್ಪತ್ರೆಗೆ ಹೋದೆವು ಎಂದ ಮೃತ್ಯುಂಜಯ ತಿಳಿಸಿದರು.