MSIL ಮದ್ಯದ ಅಂಗಡಿ ಬಾಗಿಲು ಬೆಳಗ್ಗೆ 6ಕ್ಕೆ ತೆರೆದಿತ್ತು, ಬಳಿ ಹೋದ ಗ್ರಾಮಸ್ಥರಿಗೆ ಆಘಾತ ಕಾದಿತ್ತು

SHIVAMOGGA LIVE NEWS | 9 FEBRUARY 2024 

BHADRAVATHI : MSIL ಮದ್ಯದ ಅಂಡಿಯ ಬಾಗಿಲು ಮುರಿದು ವ್ಯಾಪಾರದ ಹಣ ಮತ್ತು ಆರ್‌ ಟಿನ್‌ ಬಿಯರ್‌ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಅಂತರಗಂಗೆ ರಸ್ತೆಯ ಯರೇಹಳ್ಳಿ ಭೋವಿ ಕಾಲೋನಿಯ ಮಳಿಗೆಯಲ್ಲಿ ಘಟನೆ ಸಂಭವಿಸಿದೆ.  

ಮದ್ಯದ ಅಂಗಡಿಯ ಬಾಗಿಲನ್ನು ಆಯುಧದಿಂದ ಮೀಟಲಾಗಿದೆ. ಅಂಗಡಿಯ ಒಳಗೆ ವ್ಯಾಪಾರದ ಹಣ 44,860 ರೂ. ಮತ್ತು 630 ರೂ. ಮೌಲ್ಯದ ಆರು ಟಿನ್‌ ಬಿಯರ್‌ ಕಳ್ಳತನ ಮಾಡಲಾಗಿದೆ. ಮರುದಿನ ಬೆಳಗ್ಗೆ 6 ಗಂಟೆಗೆ ಗ್ರಾಮಸ್ಥರು ಮದ್ಯದ ಅಂಗಡಿಯ ಬಾಗಿಲು ತೆರೆದಿರುವುದನ್ನು ಗಮನಿಸಿ ಮಾಲೀಕರಿಗೆ ಕರೆ ಮಾಡಿದ್ದರು. ಆಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ – KSRTC ಪ್ರಯಾಣಿಕರೆ ಹುಷಾರ್‌, ನಿಲ್ದಾಣದಲ್ಲಿ ಮತ್ತೆ ಟಾರ್ಗೆಟ್‌ ಆಯ್ತು ವ್ಯಾನಿಟಿ ಬ್ಯಾಗ್‌, ಬಸ್‌ ಹತ್ತಿದ್ದ ಶಿಕ್ಷಕಿಗೆ ಬಿಗ್ ಶಾಕ್

Money-and-liquor-theft-at-Bhadravathi-MSIL-Shop

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment