ಭದ್ರಾವತಿ: ಮೊಬೈಲ್ ಫೋನ್ ಕಳೆದು ಹೋದ ಬಳಿಕ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹1.60 ಲಕ್ಷ ಹಣ ಕಡಿತವಾಗಿದೆ. ಫೋನ್ ಪೇನಿಂದ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಭದ್ರಾವತಿ ತಾಲೂಕಿನ ವ್ಯಕ್ತಿಯೊಬ್ಬರು ಕೆಲಸದ ನಿಮಿತ್ತ ಮುತ್ತಿನಕೊಪ್ಪಕ್ಕೆ ತೆರಳಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಕಳೆದು ಹೋಗಿತ್ತು. ಬಳಿಕ ಹೊಸ ಮೊಬೈಲ್ ಖರೀದಿಸಿ, ಡೂಪ್ಲಿಕೇಟ್ ಸಿಮ್ ಪಡೆದು ಆನ್ ಮಾಡುತ್ತಿದ್ದಂತೆ ಕೆನರಾ ಬ್ಯಾಂಕ್‌ನಿಂದ ಹಣ ಕಡಿತದ ಎಸ್‌ಎಂಎಸ್‌ಗಳು ಬಂದಿದ್ದವು.
ಇದನ್ನೂ ಓದಿ » ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮೊಬೈಲ್ ಕಳೆದು ಹೋದ ಬಳಿಕ ಎರಡು ದಿನ ನಿರಂತರವಾಗಿ ₹1.60 ಲಕ್ಷ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಸೈಬರ್ ಕ್ರೈಮ್ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಲ್ಲದೆ ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
money transferred from missiing mobile
