ಭದ್ರಾವತಿ: ಬಾರಂದೂರು ಗ್ರಾಮದಲ್ಲಿ ಮನಿಯ ಎಂಬುವರಿಗೆ ಸೇರಿದ ಒಟ್ಟು ₹90 ಸಾವಿರ ಮೌಲ್ಯದ ಆರು ಮೇಕೆಗಳು ಕಳ್ಳತನವಾಗಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ಐದು ಮೇಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಿಮ್ಲಾಪುರ ತಾಂಡಾದ ನಿವಾಸಿ ರವಿಕುಮಾರ್ ಅಲಿಯಾಸ್ ಕುಂಟ ರವಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ₹70 ಸಾವಿರ ಮೌಲ್ಯದ ಐದು ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರ್.ಎನ್ ಮಾರ್ಗದರ್ಶನದಲ್ಲಿ, ಎಎಸ್‌ಐ ಕುಮಾರ್ ಹಾಗೂ ಕ್ರೈಮ್ ವಿಭಾಗದ ಸಿಬ್ಬಂದಿ ನಾಗರಾಜ್, ಬಸವರಾಜ್ ಮತ್ತು ಭರತ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿದೆ.

ಇದನ್ನೂ ಓದಿ:➤ ಮಗುವಿಗೆ ಔಷಧ ತರಲು ಬೈಕ್ನಲ್ಲಿ ಹೋಗಿದ್ದ ವ್ಯಕ್ತಿಗೆ ಟ್ರಾಕ್ಟರ್ ಡಿಕ್ಕಿ, ಗಂಭೀರ ಗಾಯ, ಹೇಗಾಯ್ತು ಘಟನೆ?