ಭದ್ರಾವತಿಯಲ್ಲಿ ಕೊಲೆ ಕೇಸ್‌, ಐವರು ಅರೆಸ್ಟ್‌, ಹತ್ಯೆಗೆ ಕಾರಣ ಬಾಯಿಬಿಟ್ಟ ಆರೋಪಿಗಳು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE | 24 JULY 2023

BHADRAVATHI : ಮನೆ ಗೇಟ್‌ನಲ್ಲಿಯೇ ರೌಡಿ ಶೀಟರ್‌ ಮಹ್ಮದ್‌ ಮುಜಾಹಿದ್‌ ಹತ್ಯೆ ಮಾಡಿದ್ದ ಐವರು ಆರೋಪಿಗಳನ್ನು ಪೇಪರ್‌ ಟೌನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ (Arrest). ವಿಚಾರಣೆ ವೇಳೆ ಆರೋಪಿಗಳು ಹತ್ಯೆಗೆ ಕಾರಣ ಬಾಯಿಬಿಟ್ಟಿದ್ದಾರೆ.

paper-Town-police-arrest-5-in-mohammed-mujahid-case

ಯಾರನ್ನೆಲ್ಲ ಬಂಧಿಸಲಾಗಿದೆ?

ಹಿರಿಯೂರಿನ ಸಂತೋಷ್‌ ಕುಮಾರ್‌ ಅಲಿಯಾಸ್‌ ಗುಂಡ ಅಲಿಯಾಸ್‌ ಕರಿಯಾ (33), ಹೊಸಮನೆಯ ಸುರೇಂದ್ರ ಅಲಿಯಾಸ್‌ ಆಟೋ ಸೂರಿ (36), ಕುವೆಂಪು ನಗರದ ಮಂಜುನಾಥ ಅಲಿಯಾಸ್‌ ಬಿಡ್ಡ (33), ಭೂತನಗುಡಿಯ ವಿಜಯ್‌ ಕುಮಾರ್‌ ಅಲಿಯಾಸ್‌ ಪವರ್‌ (25), ಬಾರಂದೂರು ಹಳ್ಳಿಕೆರೆಯ ವೆಂಕಟೇಶ್‌ ಅಲಿಯಾಸ್‌ ಲೂಸ್‌ (23) ಬಂಧಿತರು (Arrest).

ಹತ್ಯೆಗೆ ಕಾರಣವೇನು?

ಬೊಮ್ಮನಕಟ್ಟೆ ವಾಸಿ ಮೊಹಮ್ಮದ್‌ ಮುಜಾಹಿದ್‌ ಅಲಿಯಾಸ್‌ ಮುಜ್ಜು (34) ಎಂಬಾತನನ್ನು ಜು.20ರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹತ್ಯೆಗೆ ಕಾರಣ ಬಾಯಿ ಬಿಟಿದ್ದಾರೆ.

Parishrama NEET Academy

2019ರಲ್ಲಿ ಮುಜಾಹಿದ್‌ ರಮೇಶ್‌ ಎಂಬಾತನ ಹತ್ಯೆ ಮಾಡಿದ್ದ. ಸಂತೋಷ್‌ ಮತ್ತು ಸುರೇಂದ್ರ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಹಳೆ ದ್ವೇಷದ ಹಿನ್ನೆಲೆ ಆರೋಪಿಗಳು ಮುಜಾಹಿದ್‌ನ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಮನೆ ಗೇಟ್‌ ಮುಂದೆಯೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಹತ್ಯೆಯಾದವನು ಯಾರು?

ಹಿರಿಯ ಸಹಾಯಕ ಪೊಲೀಸ್‌ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಗುರುರಾಜ್‌ ಮೈಲಾರ್‌, ನಗರ ವೃತ್ತದ ಇನ್ಸ್‌ಪೆಕ್ಟರ್‌ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ, ಪಿಎಸ್‌ಐ ಕವಿತಾ, ಎಎಸ್‌ಐ ರತ್ನಾಕರ್‌, ಸಿಬ್ಬಂದಿ ವೆಂಟೇಶ್‌, ವಾಸುದೇವ್‌, ಅರುಣ, ನಾಗರಾಜ್‌, ಎಂ.ಚಿನ್ನಾನಾಯ್ಕ, ಚನ್ನಕೇಶವ, ಹಾಲಪ್ಪ, ಮಂಜುನಾಥ, ಹಣಮಂತ ಆವಟಿ, ಆದರ್ಶ ಶೆಟ್ಟಿ, ವಿಕ್ರಮ್‌, ಶಿವಪ್ಪ, ಮಂಜುನಾಥ ಮಳ್ಳಿ ಮೌನೇಶ್‌, ಈರಯ್ಯ, ಜಿಲ್ಲಾ ಪೊಲೀಸ್‌ ಕಚೇರಿ ತಾಂತ್ರಿಕ ಸಿಬ್ಬಂದಿ ಇಂದ್ರೇಶ್‌, ಗುರುರಾಜ್‌, ವಿಜಯ್‌ ಕುಮಾರ್‌ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದೆ.

Leave a Comment