ಭದ್ರಾವತಿಯಲ್ಲಿ ಗೋಂಧಿ ಚಾನಲ್ ಏರಿ ಮೇಲೆ ಪೊಲೀಸರ ದಾಳಿ, ಮೂವರು ಅರೆಸ್ಟ್

SHIVAMOGGA LIVE NEWS |4 JANUARY 2023

BHADRAVATHI : ಗೋಂಧಿ ಚಾನಲ್ ಏರಿ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಮೇಲೆ ಪೊಲೀಸರು ದಾಳಿ (raid) ನಡೆಸಿದ್ದಾರೆ. ಅವರಿಂದ ಗಾಂಜಾ, ನಗದು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಹೊಸಮನೆ ಠಾಣೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಡ್ಯಾನಿ ಅಲಿಯಾಸ್ ಸ್ನೇಕ್ ಡ್ಯಾನಿ, ಯಾಸೀನ್ ಸೇರಿ ಮೂರನ್ನು ಬಂಧಿಸಲಾಗಿದೆ.

ಇದನ್ನೂ ಓದಿ – ಅಬ್ಬಿ ಫಾಲ್ಸ್ ನಲ್ಲಿ ಯುವಕ ನೀರು ಪಾಲು, ಮೃತದೇಹ ಪತ್ತೆ

Kalleshwara-Enterprises.webp

ಹೊಸಮನೆ ಶಿವಾಜಿ ಸರ್ಕಲ್ ಬಳಿ ಗೋಂಧಿ ಚಾನಲ್ ಏರಿ ಮೇಲೆ ಮೂವರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ (raid) ನಡೆಸಿದ್ದರು. ಈ ವೇಳೆ 540 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ 11,800 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ಬಳಿ ಇದ್ದ 350 ರೂ. ನಗದು ವಶಕ್ಕೆ ಪಡೆಯಲಾಗಿದೆ.

ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment