ಭದ್ರಾವತಿ ತಾಲ್ಲೂಕಿನ ಹಲವೆಡೆ ಸೆಪ್ಟೆಂಬರ್‌ 2 ರಿಂದ 4ರವರೆಗೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಭದ್ರಾವತಿ: ಉಪ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆ ಭದ್ರಾವತಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಸೆಪ್ಟೆಂಬರ್‌ 2ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಜಟ್‌ಪಟ್ ನಗರ, ಖಲಂದರೀಯ ನಗರ, ಮೊಮೀನ್ ಮೊಹಲ್ಲಾ, ಅನ್ವರ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Power Cut

ಸೆಪ್ಟೆಂಬರ್‌ 2 ರಿಂದ ಸೆ.4ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಬೊಮ್ಮನಕಟ್ಟೆ, ತಿಮ್ಲಪುರ, ಮೂಲೆಕಟ್ಟೆ, ಹೊಸ ಬುಳ್ಳಾಪುರ, ಹಳೇ ಬುಳ್ಳಾಪುರ, ಬೈಪಾಸ್ ರಸ್ತೆ, ಮಿಲಿಟರಿ ಕ್ಯಾಂಪ್, ಹುಡ್ಕೊ ಕಾಲೋನಿ, ನ್ಯೂ ಟೌನ್, ನ್ಯೂ ಕಾಲೋನಿ, ಆಂಜನೇಯ ಅಗ್ರಹಾರ, ವಿದ್ಯಾ ಮಂದಿರ, ಗಣೇಶ ಕಾಲೋನಿ, ಜನ್ನಾಪುರ, ಕಿತ್ತೂರು ಚೆನ್ನಮ್ಮ ಬಡಾವಣೆ, ರಾಜಪ್ಪ ಲೇಔಟ್, ಆನೆಕೊಪ್ಪ ಪಂಪ್ ಹೌಸ್ ಪ್ರದೇಶ, ಹಿರಿಯೂರು, ಅರಳಿಕೊಪ್ಪ, ರಬ್ಬರ್ ಕಾಡು, ಬಾಳೆ ಮಾರನಹಳ್ಳಿ, ಸುಲ್ತಾನ್ ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕ ಗೊಪ್ಪನಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.