ಭದ್ರಾವತಿಯ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಭದ್ರಾವತಿ: ನಗರದಲ್ಲಿ ವಿದ್ಯುತ್ ಮಾರ್ಗ ದುರಸ್ತಿ ಕಾಮಗಾರಿ ಹಿನ್ನೆಲೆ ಆ.3 ಮತ್ತು 4ರಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಹುಡ್ಕೊ ಕಾಲೊನಿ, ಜನ್ನಾಪುರ, ಬೊಮ್ಮನಕಟ್ಟೆ, ಹೌಸಿಂಗ್ ಬೋರ್ಡ್, ಸಿದ್ದಾಪುರ, ಎನ್‌ಟಿಬಿ ಲೇಔಟ್, ಹೊಸೂರ್ ತಾಂಡಾ, ಹಿರಿಯೂರು, ಅರಳಿಕೊಪ್ಪ, ರಬ್ಬರ್ ಕಾಡು, ಬಾಳೆ ಮಾರನಹಳ್ಳಿ, ಸುಲ್ತಾನ್ ಮಟ್ಟಿ, ತಾರೀಕಟ್ಟೆ, ಹೊಳೆ ಗಂಗೂರು, ಚಿಕ್ಕಗೊಪ್ಪೆನಹಳ್ಳಿ, ಗೊಂದಿ, ಕಾಳನ ಕಟ್ಟೆ, ಕಂಬದಾಳ್ ಹೊಸೂರ್, ಹೊನ್ನಹಟ್ಟಿ ಹೊಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

power cut mescom ELECTRICITY