| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಅಕ್ಟೋಬರ್ 2020
ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ನಿರಾವರಿ ನಿಗಮದ BRLBCಯ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಮತ್ತು ಗುತ್ತಿಗೆ ನೌಕರರು ಮಿಲ್ಟ್ರಿಕ್ಯಾಂಪ್‍ನಲ್ಲಿರುವ ನೀರಾವರಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನೆಡೆಸಿದರು.
ನಾಲ್ಕು ವಿಭಾಗಗಳಲ್ಲಿ 500 ಮಂದಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದಿನ ಗುತ್ತಿಗೆದಾರ ಎರಡು ತಿಂಗಳ ವೇತನ ನೀಡಿರಲಿಲ್ಲ. ಹಾಗಾಗಿ ಹೋರಾಟ ನಡೆಸಿದ ಪರಿಣಾಮ ಹೊಸ ಗುತ್ತಿಗೆ ನೇಮಕ ಮಾಡಲಾಗಿದೆ. ಹೊಸ ಗುತ್ತಿಗೆದಾರ ಇಎಸ್ಐ, ಪಿಎಫ್ ಕಂತು ಹಾಗೂ ವೇತನ ವ್ಯತ್ಯಾಸದ ಹಣ ತುಂಬಿಲ್ಲ ಎಂದು ಆರೋಪಿಸಿದರು.

ವೇತನವಿಲ್ಲದೆ ದಿನಗೂಲಿ ನೌಕರರ ಬದುಕು ದುಸ್ಥರವಾಗಿದೆ. ಆದ್ದರಿಂದ ಹಳೆ ಗುತ್ತಿಗೆದಾರ ಎರಡು ತಿಂಗಳ ವೇತನವನ್ನು ತಕ್ಷಣ ನೀಡಬೇಕು ಮತ್ತು ಹೊಸ ಗುತ್ತಿಗೆದಾರರು ಇಎಸ್ಐ, ಪಿಎಫ್ ಕಂತು ಹಣ ತುಂಬಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿಗೆ ಸ್ಪಂಧಿಸಿದ ಕಾರ್ಯಪಾಲಕ ಇಂಜಿನಿಯರ್ ರವಿಚಂದ್ರನ್ ಗುತ್ತಿಗೆದಾರರನ್ನು ಕರೆಸಿ ಮತನಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ನೀರಾವರಿ ಇಲಾಖೆ ದಿನಗೂಲಿ ಹಾಗೂ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಹರೀಶ್, ಪ್ರಕಾಶ್ ಕುಮಾರ್, ಕರಿಬಸಪ್ಪ, ಬೊಮ್ಮನಕಟ್ಟೆ ಪ್ರಕಾಶ್, ದೇವೇಂದ್ರಪ್ಪ, ಅಸ್ಮಾ ಬಾನು, ಮೇರಿ, ಶೋಭಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಾಲಿವುಡ್ ನಟರ ಫೋಟೊಗಳಿಗೆ ಚಪ್ಪಲಿ ಏಟು, ಕಾರಣವೇನು?
- ಆಯನೂರು ಸೇರಿ ಹಲವೆಡೆ ಡಿ.17ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಓದಲು ಇಲ್ಲಿ ಕ್ಲಿಕ್ ಮಾಡಿ
- ಅಡಿಕೆ ಧಾರಣೆ | 16 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ತಾಳಗುಪ್ಪ – ಬೆಂಗಳೂರು ರೈಲು ಅರಸೀಕೆರೆವರೆಗೆ ಮಾತ್ರ, ಯಶವಂತಪುರ ಎಕ್ಸ್ಪ್ರೆಸ್ಗೆ ಬದಲಿ ಮಾರ್ಗ
- ಶಿವಮೊಗ್ಗದಲ್ಲಿ ಮೂರು ದಿನ ಕಣ್ಣಿನ ಉಚಿತ ತಪಾಸಣೆ, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?
- ಶಿವಮೊಗ್ಗದ ಬಸವನಗುಡಿ, ವಿದ್ಯಾನಗರದಲ್ಲಿ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
![]()