ಭದ್ರಾವತಿ ಜಂಕ್ಷನ್‌ನಲ್ಲಿ ರಸ್ತೆ ಮೇಲೆ ಮಹಿಳೆಯ ಮೃತದೇಹ ಇರಿಸಿ ಹೋರಾಟ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಭದ್ರಾವತಿ : ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೆ ಹೆದ್ದಾರಿಯಲ್ಲಿ ಮೃತದೇಹವನ್ನು ಇರಿಸಿ ಪ್ರತಿಭಟನೆ (Protest) ನಡೆಸಿದರು.

ಇದನ್ನೂ ಓದಿ » ಸಾಗರದಲ್ಲಿ ಲಾರಿ, ಕಾರು ಪಲ್ಟಿ, ಅಪಘಾತಕ್ಕೆ ಕಾರಣ ಹಾವು, ಏನಿದು ಪ್ರಕರಣ?

ಕಳೆದ ರಾತ್ರಿ ಭದ್ರಾವತಿ ತಾಲೂಕು ಹುಣಸೇಕಟ್ಟೆ ಜಂಕ್ಷನ್‌ನಲ್ಲಿ ಅಶ್ವಿನಿ ಪ್ರಮೋದ್‌ (27) ಎಂಬ ಗೃಹಿಣಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗಂಡ ಮನೆಗೆ ಮರಳಿದಾಗ ಅಶ್ವಿನಿ ನೇಣು ಬಿಗಿದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

190425%20Police%20at%20Hunasekatte%20Junction%20in%20Bhadravathi

ಆತ್ಮಹತ್ಯೆಯಲ್ಲ, ಕೊಲೆ ಅಂತಾ ಆರೋಪ

ಇನ್ನು, ಅಶ್ವಿನಿಯದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆಯ ಕುಟುಂಬದವರು ಆರೋಪಿಸಿದರು. ಅಶ್ವನಿಯ ಗಂಡನ ಮನೆಯವರೆ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.

Ashwini-Death-case-family-members-protest-at-junction-in-Bhadravathi.

ಹುಣಸೇಕಟ್ಟೆ ಜಂಕ್ಷನ್‌ನಲ್ಲಿ ರಸ್ತೆಯ ಮೇಲೆ ಅಶ್ವಿನಿಯ ಮೃತದೇಹವನ್ನು ಇರಿಸಿ ಪ್ರತಿಭಟನೆ (Protest) ನಡೆಸಿದರು. ಅಶ್ವಿನಿಯ ಕುಟುಂಬದವರು, ಸಂಬಂಧಿಕರು, ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment