ಬೆಳಿಗ್ಗೆ ಅಡಿಕೆ ತೋಟಕ್ಕೆ ಬಂದ ಮಾಲೀಕರಿಗೆ ಕಾದಿತ್ತು ಆಘಾತ, ಆಗಿದ್ದೇನು?

ಭದ್ರಾವತಿ: ಅಡಿಕೆ ತೋಟದಲ್ಲಿದ್ದ ಸುಮಾರು ₹15,000 ಮೌಲ್ಯದ ಪಂಪ್ ಸೆಟ್ ಮೋಟಾರ್‌ ಕಳ್ಳತನವಾಗಿದೆ. ತಾಲ್ಲೂಕಿನ ಬಾಳೆಮಾರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲೇಶಪ್ಪ ಎಂಬುವವರ ಅಡಿಕೆ ತೋಟವನ್ನು ಅವರ ಸಹೋದರ ಮಂಜುನಾಥ್‌ ನಿರ್ವಹಣೆ ಮಾಡುತ್ತಿದ್ದಾರೆ. ತೋಟಕ್ಕೆ ನೀರು ಹಾಯಿಸಲು ಕಿರ್ಲೋಸ್ಕರ್ ಕಂಪನಿಯ 2 ಹೆಚ್.ಪಿ. ಪಂಪ್ ಸೆಟ್ ಮೋಟಾರ್ ಅಳವಡಿಸಲಾಗಿತ್ತು.

ಸಂಜೆ ಜಮೀನಿಗೆ ನೀರು ಹಾಯಿಸಿ ಮನೆಗೆ ತೆರಳಿದ್ದ ಮಂಜುನಾಥ್ ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮೋಟಾರ್ ಕಾಣೆಯಾಗಿತ್ತು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪೇಪರ್ ಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BHADRAVATHI-NEWS-GRAPHICS-BY-SHIVAMOGGA-LIVE.