ಶಿವಮೊಗ್ಗ ಭದ್ರಾವತಿ ಮಧ್ಯೆ ರೈಲ್ವೆ ಮೇಲ್ಸೇತವೆ, ಉದ್ಘಾಟನೆ ಯಾವಾಗ ಗೊತ್ತಾ?

SHIVAMOGGA LIVE NEWS, 5 DECEMBER 2024 ➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಭದ್ರಾವತಿ : ಕಡದಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ (Flyover) ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲನೆ ನಡೆಸಿದರು. ಈ ತಿಂಗಳ ಅಂತ್ಯದೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ – ಭದ್ರಾವತಿ ಹದ್ದಾರಿಯ ಕಡದಕಟ್ಟೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. 2022ರ ಜನವರಿಯಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಯಿತು. ಈಗ ಮೇಲ್ಸುತುವೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.

ಸಂಸದ ರಾಘವೇಂದ್ರ ಪರಿಶೀಲನೆ

ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲಿಸಿದರು. ಈ ಸಂದರ್ಭ ರೈಲ್ವೆ ಇಲಾಖೆ ಅಧಿಕಾರಿಗಳು, ಇಂಜಿಯರ್‌ಗಳ ಜೊತೆ ಚರ್ಚಿಸಿದರು.

MP-BY-Raghavendra-checks-ROB-at-kadadakatte Flyover

2025ರ ಜನವರಿ 1ರಿಂದ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೆಲವು ಸಮಸ್ಯೆಗಳು ಮತ್ತು ಮಳೆಯ ನಡುವೆಯು ನಿಗದಿಯಂತೆ ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡಿದೆ. ಎರಡು ವರ್ಷದಿಂದ ಈ ಭಾಗದ ಜನರಿಗೆ ತೊಂದರೆ ಆಗಿದೆ. ಈಗ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಜನರ ಸಂಚಾರ ಸುಗಮವಾಗಲಿದೆ.

– ಬಿ.ವೈ.ರಾಘವೇಂದ್ರ, ಸಂಸದ

MP-BY-Raghavendra-checks-ROB-at-kadadakatte Flyover

RED-LINE-

ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್‌, ಧರ್ಮಪ್ರಸಾದ್‌, ರಾಜು ತಲ್ಲೂರು ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

Railway Over bridge flyover at kadadakatte in Bhadravathi

Railway Over bridge flyover at kadadakatte in Bhadravathi

ಇದನ್ನೂ ಓದಿ » ಜನರ ಸಮಸ್ಯೆ ನೋಡಲಾಗದೆ ರಸ್ತೆ ಗುಂಡಿಗಳನ್ನು ಮುಚ್ಚಿದ ಗ್ರಾಮ ಪಂಚಾಯಿತಿ ಸದಸ್ಯ

Flyover

Leave a Comment