ಭದ್ರಾವತಿಯಲ್ಲಿ ಮುಂದುವರೆದ ಮಳೆ, ಕಾಂಪೌಂಡ್‌ ಕುಸಿತ, ಮನೆಗಳು ಜಲಾವೃತ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
BHADRAVATHI NEWS, 12 OCTOBER 2024 : ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರ (RAIN) ಮುಂದುವರೆದಿದೆ. ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಗೋಡೆ ಕುಸಿತದ ವರದಿಯಾಗಿದೆ.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮುಂದುವರೆದ ಮಳೆ ಅಬ್ಬರ

ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸಿಂಗನಮನೆ, ಮಾವಿನಕೆರೆ, ಹಿರಿಯೂರು, ಅರಳಹಳ್ಳಿ, ಕಾಗೆಕೊಡಮಗ್ಗಿ, ತಡಸ, ಬಿಳಕಿ, ನಾಗತಿಬೆಳಗಲು, ಅರೆಬಿಳಚಿ, ಕಲ್ಲಿಹಾಳ್‌, ಎಮ್ಮೆಹಟ್ಟಿ, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿ, ದಾಸರಕಲ್ಲಹಳ್ಳಿ, ಯರೆಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.

Rainfall-at-bhadravathi-taluk

ಗೋಡೆ ಕುಸಿತ, ಮನೆಗಳಿಗೆ ನೀರು

ಮಳೆ ಮುಂದುವರೆದ ಹಿನ್ನೆಲೆ ಚರಂಡಿಗಳು ತುಂಬಿ, ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿದೆ. ಜನ್ನಾಪುರದ ಕಿತ್ತೂರು ರಾಣಿ ಚೆನ್ನಮ್ಮ ಬ್ಲಾಕ್‌ನ ಮನೆಯೊಂದರೆ ಕಾಂಪೌಂಡ್‌ ಗೋಡೆ ಕುಸಿದಿದೆ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರಗೆ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

Leave a Comment