ಹೊಳೆಹೊನ್ನೂರು: ಸಮೀಪದ ಅರಹತೊಳಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಮುಸಿಯವನ್ನು ಬನವಾಸಿಯಿಂದ ಬಂದ ವಿಶೇಷ ತಂಡವು ಸೆರೆಹಿಡಿದಿದೆ.
ಕಳೆದ ಭಾನುವಾರ ಈ ಮುಸಿಯ ಗ್ರಾಮದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಒಂಟಿಯಾಗಿ ಯಾರೇ ಕಂಡರೂ ದಾಳಿಗೆ ಮುಂದಾಗುತ್ತಿದ್ದರಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯ ಪಡುವಂತಾಗಿತ್ತು. ಈ ಹಿನ್ನಲೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಬನವಾಸಿಯ ವೀರಯ್ಯ ಸಗಣಚಾರಿ ನೇತೃತ್ವದ ತಂಡವನ್ನು ಕರೆಯಿಸಲಾಯಿತು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಮುಸಿಯವನ್ನು ಸೆರೆ ಹಿಡಿಯಲಾಗಿದ್ದು, ಅದನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮನೋಹರ್, ಕೆ. ಹನುಮಂತಪ್ಪ ಹಾಗೂ ಪಿಡಿಒ ಎನ್. ದೊರೆ ಪಾಲ್ಗೊಂಡಿದ್ದರು.

ಇದನ್ನೂ ಓದಿ:➤ ಮಗುವಿಗೆ ಔಷಧ ತರಲು ಬೈಕ್ನಲ್ಲಿ ಹೋಗಿದ್ದ ವ್ಯಕ್ತಿಗೆ ಟ್ರಾಕ್ಟರ್ ಡಿಕ್ಕಿ, ಗಂಭೀರ ಗಾಯ, ಹೇಗಾಯ್ತು ಘಟನೆ?