ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 29 APRIL 2024
ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಪೊಲೀಸ ಇಲಾಖೆ ಮತ್ತು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಪಥ ಸಂಚಲನ ನಡೆಸಿದರು.
ಭದ್ರಾವತಿ : ಡಿವೈಎಸ್‌ಪಿ ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಐಟಿಬಿಪಿ ಸಿಬ್ಬಂದಿ ರೂಟ್ ಮಾರ್ಚ್ ಮಾಡಿದರು. ಗಾಂಧಿ ವೃತ್ತದಿಂದ ಆರಂಭವಾದ ಪಥ ಸಂಚಲನ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಸಂತೆ ಮೈದಾನ, ಹೊಸಮನೆ ಮುಖ್ಯ ರಸ್ತೆಯಿಂದ ಗಾಂದಿ ವೃತ್ತಕ್ಕೆ ಬಂದು ತಲುಪಿತು. ಭದ್ರಾವತಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಶೈಲ, ಐಟಿಬಿಪಿಯ ಅಸಿಸ್ಟೆಂಟ್ ಕಮಾಂಡೆಂಟ್ ರಾಜೀವ್ ಸೇರಿದಂತೆ ಸಿಬ್ಬಂದಿ ಇದ್ದರು.
ಸಾಗರ : ಪಟ್ಟಣದಲ್ಲಿ ಪೊಲೀಸ್ ಇಲಾಖೆ ಮತ್ತು ಆರ್‌ಪಿಎಸ್‌ಎಫ್ ಮೀಸಲು ಪಡೆ ಸಿಬ್ಬಂದಿ ರೂಟ್ ಮಾರ್ಚ್ ನಡೆಸಿದರು. ಡಿವೈಎಸ್‌ಪಿ ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್ ನೇತೃತ್ವದಲ್ಲಿ ಸಾಗರ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯ್ಕ, ಸಾಗರ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸೀತಾರಾಂ, ಆರ್‌ಪಿಎಸ್‌ಎಫ್ ಇನ್ಸ್‌ಪೆಕ್ಟರ್ ಆಂಜನಪ್ಪ ಮತ್ತು ಸಿಬ್ಬಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಮದುವೆಗೆ ಬಂದಿದ್ದ ವ್ಯಕ್ತಿಗೆ ಕಲ್ಯಾಣ ಮಂಟಪದ ಮುಂದೆ ಲಾರಿ ಡಿಕ್ಕಿ, ಸಾವು, ಹೇಗಾಯ್ತು ಘಟನೆ?






