ಭದ್ರಾವತಿಯಲ್ಲಿ ಯುವಕನಿಗೆ ಇರಿತ, ಘಟನೆ ಕುರಿತು ರಕ್ಷಣಾಧಿಕಾರಿ ಹೇಳಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 OCTOBER 2023

BHADRAVATHI : ಯುವಕನಿಗೆ ಇರಿತ ಪ್ರಕರಣ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ (Media) ಸ್ಪಷ್ಟನೆ ನೀಡಿದ್ದಾರೆ. ಮೊಬೈಲ್‌ ಫೋನ್‌ ಅಡವಿಡುವ ವಿಚಾರ ಮತ್ತು ವೈಯಕ್ತಿಕ ಕಾರಣಕ್ಕೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಆಗಿದ್ದೇನು?

ಭದ್ರಾವತಿ ಹನುಮಂತನಗರದಲ್ಲಿ ನಂದಾ ಎಂಬಾತನಿಗೆ ಸೋಮವಾರ ಇರಿಯಲಾಗಿತ್ತು. ಕೂಡಲೆ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಷಯ ತಿಳಿಯುತ್ತಲೆ ವಿವಿಧ ಸಂಘಟನೆ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು.

ವಾಟ್ಸಪ್‌ನಲ್ಲಿ ಎಸ್‌ಪಿ ಸ್ಪಷ್ಟನೆ

ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ವಾಟ್ಸಪ್‌ ಮೆಸೇಜ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಯುವಕನಿಗೆ ಚೂಪಾದ ವಸ್ತುವಿನಿಂದ ಇರಿಯಲಾಗಿದೆ. ಘಟನೆ ಸಂಬಂಧ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ ಫೋನ್‌ ಅಡವಿಡುವ ವಿಚಾರ ಮತ್ತು ವೈಯಕ್ತಿಕ ವಿಚಾರಕ್ಕೆ ಘಟನೆ ಸಂಭವಿಸಿದೆ. ಇದರಲ್ಲಿ ಯಾವುದೆ ಕೋಮು ವಿಚಾರಗಳಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ – ಸದ್ಯದಲ್ಲೆ ವಾಟ್ಸಪ್‌ನಲ್ಲಿ ‘ಸೀಕ್ರೆಟ್‌ ಕೋಡ್‌’ ಚಾಟಿಂಗ್‌, ಏನಿದು? ಹೇಗೆ ಕೆಲಸ ಮಾಡುತ್ತೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment