ಭದ್ರಾವತಿ ಆಕಾಶವಾಣಿಯಲ್ಲಿ ಜ.3ರಿಂದ ವಿಶೇಷ ಸರಣಿ ಕಾರ್ಯಕ್ರಮ, ಸಮಯ ಪ್ರಕಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 JANUARY 2023

BHADRAVATHI : ಸ್ವಚ್ಛ ಭಾರತ ಅಭಿಯಾನದ ಕುರಿತು ಭದ್ರಾವತಿ ಆಕಾಶವಾಣಿ ಕೆಂದ್ರದಿಂದ ವಿಶೇಷ ಸರಣಿ ಕಾರ್ಯಕ್ರಮ ಸ್ವಚ್ಛತೆಯಡೆಗೆ ನಮ್ಮ ಪಯಣ ಆರಂಭಿಸಲಾಗುತ್ತಿದೆ. ಜ.3 ರಿಂದ ಬೆಳಗ್ಗೆ 8.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮ ಮುಖಸ್ಥ ಎಸ್‌.ಆರ್‌.ಭಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ದಿನ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಫಲಾನುಭವಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. FM103.5 ಮತ್ತು MW675Khz ನಲ್ಲಿ ಕಾರ್ಯಕ್ರಮ ಕೇಳಬಹುದಾಗಿದೆ. ಪ್ರಸಾರ ಭಾರತಿಯ NEWS ON AIR APP ಮತ್ತು Akashavani Bhadravathi ಯು ಟ್ಯೂಬ್‌ ಚಾನಲ್‌ನಲ್ಲೂ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ – ಜ.4ರಂದು ಕರಾಳ ದಿನ ಆಚರಣೆ, ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment