ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಭದ್ರಾವತಿ: ಭದ್ರಾ ನದಿಗೆ ಪ್ಲಾಸ್ಟಿಕ್ ಕವರ್ಗಳು ಮತ್ತು ತ್ಯಾಜ್ಯ ಎಸೆಯುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ (pollution). ಇದನ್ನು ತಡೆಗಟ್ಟಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾ ನದಿ ಸಂರಕ್ಷಣಾ ಪಡೆ ನೇತೃತ್ವದಲ್ಲಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾ ನದಿ ಸೇತುವೆಗಳ ಮೇಲಿಂದಲೇ ಕಸವನು ನೇರವಾಗಿ ನದಿಗೆ ಎಸೆಯಲಾಗುತ್ತಿದೆ. ಇದು ಜಲ ಮಾಲಿನ್ಯ ತಡೆ ಕಾಯ್ದೆ 1974ರ ಅಡಿ ನದಿ ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೆ, 2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಅನ್ವಯ ಪ್ಲಾಸ್ಟಿಕ್ ಬಳಕೆಯೂ ನಿಷೇಧಿತವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಗರಸಭೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (NGT) ನದಿ ಮಾಲಿನ್ಯ ತಡೆಗಟ್ಟಲು ವಿಫಲವಾದ ಹಲವು ನಗರ ಸ್ಥಳೀಯ ಸಂಸ್ಥೆಗಳಿಗೆ ಪರಿಸರ ಪರಿಹಾರ ಶುಲ್ಕ ವಿಧಿಸಿರುವ ನಿದರ್ಶನಗಳಿವೆ ಎಂದು ಮನವಿಲ್ಲಿ ತಿಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ತೀರ್ಥೇಶ್.ಸಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ : ಕೇಕ್, ಬಿಸ್ಕತ್ತು, ಕುಕೀಸ್ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

LATEST NEWS
- ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್, ದಾಖಲಾಯ್ತು ಕೇಸ್

- ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

- ಭದ್ರಾವತಿಯ ಭದ್ರಾ ನದಿಗೆ ರಾಶಿ ರಾಶಿ ತ್ಯಾಜ್ಯ, ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

- ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

- ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

About The Editor
ನಿತಿನ್ ಆರ್.ಕೈದೊಟ್ಲು














