ಶಂಕರಘಟ್ಟದ ಕುವೆಂಪು ವಿವಿ ಕ್ಯಾಂಪಸ್‌ನಲ್ಲಿ ಮತ್ತೆ ಪ್ರತಿಭಟನೆ, ಕುಲಪತಿಗೆ ಮುತ್ತಿಗೆ ಯತ್ನ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 7 JULY 2023

SHANKARAGHATTA : ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮದ ತನಿಖೆ, ವಿದ್ಯಾರ್ಥಿ ವೇತನ ಬಿಡುಗಡೆಯಾಗದಿರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆ ನೇತೃತ್ವದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆ (Protest) ನಡೆಸಿದರು.

NSUI-held-protest-in-Kuvempu-University-Shankaraghattta

ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲದಯ ಆಡಳಿತ ಭವನದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ (Protest) ನಡೆಸಿದರು.

ವಿದ್ಯಾರ್ಥಿಗಳ ಡಿಮಾಂಡ್‌ ಏನು?

ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ತನಿಖೆ ನಡೆಸಬೇಕು. ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು. ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌ ವ್ಯವಸ್ಥೆ ಆಗಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜುಗಳಲ್ಲಿ ಕೊಠಡಿಗಳ ಸಂಖ್ಯೆ ಹೆಚ್ಚಿಸಬೇಕು. ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಕುವೆಂಪು ವಿವಿಯಿಂದ ಬಿಡುಗಡೆ ಮಾಡಬೇಕು. ಕಾಲೇಜುಗಳಲ್ಲಿ ಸ್ಥಗಿತವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಪುನಾರಂಭ ಮಾಡಬೇಕು. ಹೊಸ ಶಿಕ್ಷಣ ನೀತಿ ನೆಪವೊಡ್ಡಿ ಹೆಚ್ಚಳ ಮಾಡಿದ್ದ ಪರೀಕ್ಷಾ ಶುಲ್ಕ, ಪ್ರವೇಶ ಶುಲ್ಕವನ್ನು ಮರುಪಾವತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

NSUI Protest in Kuvempu University

ಮನವಿ ಕೊಟ್ಟರು ಪ್ರಯೋಜನವಾಗಿಲ್ಲ

ಇನ್ನು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತ್ಯೇಕವಾಗಿ ಪ್ರತಿಭಟನೆಗಳನ್ನು ನಡೆಸಿ, ಮನವಿ ಸಲ್ಲಿಸಿದ್ದರು ಪ್ರಯೋಜವಾಗಿಲ್ಲ. ಇದೆ ಪರಿಸ್ಥಿತಿ ಮುಂದುವರೆದರೆ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇನ್ನಷ್ಟು ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎನ್‌ಎಸ್‌ಯುಐ ಮುಖಂಡರು ಎಚ್ಚರಿಸಿದರು.

NSUI Protest in Kuvempu University

ಕುಲಪತಿಗೆ ಮುತ್ತಿಗೆ ಯತ್ನ

ಕುವೆಂಪು ಶತಮಾನೋತ್ಸವ ಭವನದ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಆಗಮಿಸಿದರು. ಕುಲಪತಿ ಅವರನ್ನು ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಮುಂದಾದರು. ಆಗ ನೂಕಾಟ ತಾಳ್ಳಾಟ ಸಂಭವಿಸಿತು. ಪೊಲೀಸರು, ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ – ಶಂಕರಘಟ್ಟದಲ್ಲಿ ಮಳೆಯಲ್ಲು ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ, 2 ಬೇಡಿಕೆ ಈಡೇರಿಸುವಂತೆ ಪಟ್ಟು

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಯುವ ಮುಖಂಡರಾದ ಮುರುಗೇಶ್, ರವಿಕುಮಾರ್, ಹರ್ಷಿತ್, ರವಿ ಕಾಟಿಕೆರೆ, ಧವನ್ ರಾಜ್, ನಿಸಾರ್, ಸಾಗರ್ ಕಂಡ್ರೆ, ಭಾಷಾ, ಚರಣ, ಚೇತನ್‌, ಮಧು ಸೂದನ್‌ ಸೇರಿದಂತೆ ಹಲವರು ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 7, 2023

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

Leave a Comment