ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 FEBRUARY 2021
ಭದ್ರಾವತಿಯಲ್ಲಿ ಸುಂಕದಮ್ಮ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ತಾಯಿಗೆ ತಂಬಿಟ್ಟು ಆರತಿ ಬೆಳಗಿ ಮಹಿಳೆಯರು ದೇವಿಯ ಕೃಪೆಗೆ ಪಾತ್ರರಾದರು.
ನ್ಯೂ ಟೌನ್ ಹುತ್ತಾ ಕಾಲೋನಿಯ ಗೋಲ್ಡನ್ ಜೂಬ್ಲಿ ಮಹಡಿ ಮನೆಗಳ ಸಮೀಪದ ಆಟದ ಮೈದಾನದಲ್ಲಿ ಸುಂಕದಮ್ಮ ಜಾತ್ರೆ ನಡೆಯಿತು. ಬೆಂಗಳೂರಿನ ಶಿಲ್ಪಿ ಷಣ್ಮುಗಂ ಅವರು ದೇವಿಯ ಮೂರ್ತಿಯನ್ನು ಸ್ಥಾಪಿಸಿದರು.
ಆರತಿ ಬೆಳಗಿ, ವರವ ಬೇಡಿದರು
ಭದ್ರಾವತಿಯ ವಿವಿಧ ಬಡಾವಣೆಯ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ತಂಬಿಟ್ಟು ಆರತಿ ಬೆಳಗುವುದರಿಂದ ತಾಯಿಯ ಕೃಪೆ ಸಿಗಲಿದೆ ಎಂಬ ನಂಬಿಕೆಯಿಂದ ಆರತಿ ಬೆಳಗಿ, ವರವನ್ನು ಬೇಡಿದರು. ಕರೋನ ಮಹಾಮಾರಿಯನ್ನು ದೂರಾಗಿಸಿ ಜನರು ನೆಮ್ಮದಿಯಿಂದ ಬದುಕುವಂತಾಲಿ ಎಂದು ಬೇಡಿಕೊಂಡರು.
ಜಿಂಕ್ ಲೈನ್, ವೇಲೂರು ಶೆಡ್, ಹುತ್ತಾ ಕಾಲೋನಿ, ಜನ್ನಾಪುರ, ಸಿದ್ದಾಪುರ ಸೇರಿದಂತೆ ಸುತ್ತಮುತ್ತ ಪ್ರದೇಶದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

About The Editor
ನಿತಿನ್ ಆರ್.ಕೈದೊಟ್ಲು






