ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 APRIL 2024
BHADRAVATHI : ಸಾಲು ಸಾಲು ರಜೆ ಹಿನ್ನೆಲೆ ಭದ್ರಾವತಿ ತಾಲೂಕು ಗೋಂದಿ ಅಣೆಕಟ್ಟೆಗೆ ದೊಡ್ಡ ಸಂಖ್ಯೆಯ ಯುವಕರು ಭೇಟಿ ನೀಡುತ್ತಿದ್ದಾರೆ. ಆಪಾಯಕಾರಿ ಸ್ಥಳಗಳಲ್ಲಿ ಈಜುವ ಸಾಹಸ ಮಾಡುತ್ತಿದ್ದಾರೆ. ಸ್ಥಳೀಯರ ಮಾತಿಗೂ ಕ್ಯಾರೆ ಅನ್ನುತ್ತಿಲ್ಲ.
ಕಳೆದ ವಾರ ರಜೆ ಸಂದರ್ಭ ಗೋಂದಿ ಅಣೆಕಟ್ಟೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿಂದ ಕಾಲೇಜು ವಿದ್ಯಾರ್ಥಿಗಳು, ಯುವಕರು ಭೇಟಿ ನೀಡಿದ್ದರು. ಈ ಪೈಕಿ ಹಲವರು ಈಜಲು ನೀರಿಗಿಳಿಯುತ್ತಿದ್ದಾರೆ. ಇಲ್ಲಿ ಅಪಾಯಕಾರಿ ಸ್ಥಳಗಳಿದ್ದು ನೀರಿಗಿಳಿದ ಹಲವರು ಮೃತಪಟ್ಟಿದ್ದಾರೆ.
‘ಊರವರು ಯಾರಾದರೂ ಅಣೆಕಟ್ಟೆ ಕಡೆಗೆ ಹೋದಾಗ ಅಪಾಯಕಾರಿ ಸ್ಥಳಗಳಲ್ಲಿ ಯಾರಾದೂ ಈಜುತ್ತಿದ್ದರೆ ಎಚ್ಚರಿಸುತ್ತೇವೆ. ಆದರೆ ಬಹತೇಕರು ಉಡಾಫೆ ಮಾಡುತ್ತಾರೆ. ಕೆಲವರು ನಮ್ಮೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಊರಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಇದಲ್ಲವು ಆತಂಕಕಾರಿಯಾಗಿದೆʼ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಈಚೆಗೆ ಗೋಂದಿ ಅಣೆಕಟ್ಟೆಯ ಅಪಾಯಕಾರಿ ಸ್ಥಳದಲ್ಲಿ ಈಜುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಸೂಚಿಸಿದ ಬಳಿಕ ಯುವಕರು ಸುರಕ್ಷಿತ ಸ್ಥಳದಲ್ಲಿ ಈಜಲು ಮುಂದಾಗಿದ್ದಾರೆ.
ಗೋಂದಿ ಅಣೆಕಟ್ಟೆಯನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆ ಇತ್ತು. ಆದರೆ ಈತನಕ ಅದು ಈಡೇರಿಲ್ಲ. ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದರಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸಿದರೆ ಸಿಬ್ಬಂದಿಯನ್ನು ನಿಯೋಜಿಸಬಹುದು. ಇದಂದ ಸಂಭವನೀಯ ಅವಘಡಗಳನ್ನು ತಪ್ಪಿಸಬಹುದಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಮೇಘನಾಗೆ UPSC ಪರೀಕ್ಷೆಯಲ್ಲಿ ಮತ್ತೊಮ್ಮೆ ರ‍್ಯಾಂಕ್, ಐಎಎಸ್ ಹುದ್ದೆ ದೊರೆಯುವ ನಿರೀಕ್ಷೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422