SHIVAMOGGA LIVE NEWS | 24 FEBRURARY 2023
BHADRAVATHI : ಭದ್ರಾವತಿ ಬಂದ್ ಹಿನ್ನೆಲೆ ವಿಐಎಸ್ಎಲ್ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ನಗರದ ಪ್ರಮುಖ ವೃತ್ತಗಳನ್ನು ಬಂದ್ ಮಾಡಿರುವುದರಿಂದ ಸಂಚಾರ ದಟ್ಟಣೆ (Traffic Jam) ಉಂಟಾಗಿದೆ. ಶಾಲೆ, ಕಾಲೇಜು, ಕಚೇರಿಗೆ ತೆರಳುವವರಿಗೆ ಬಂದ್ ಬಿಸಿ ತಟ್ಟಿದೆ.
ನಗರದ ಬಸ್ ನಿಲ್ದಾಣ, ಡಾ. ಅಂಬೇಡ್ಕರ್ ವೃತ್ತ, ರಂಗಪ್ಪ ಸರ್ಕಲ್ ಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ಸರ್ಕಲ್ ಗಳಲ್ಲಿ ಕಾರ್ಮಿಕರು ಗುಂಪುಗೂಡಿದ್ದರಿಂದ ವಾಹನ ಸಂಚಾರ ಕಷ್ಟವಾಗಿತ್ತು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ಓದಿ – ಭದ್ರಾವತಿ ಬಂದ್, ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ, ಹೇಗಿದೆ ಸದ್ಯದ ಪರಿಸ್ಥಿತಿ?
ಭದ್ರಾವತಿ ಹೊಸ ಸೇತುವೆ ಮೇಲೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿತ್ತು. ಕಚೇರಿಗಳಿಗೆ ತೆರಳುವವರು, ಶಾಲೆ, ಕಾಲೇಜುಗೆ ಹೋಗುವವರಿಗೆ ಬಂದ್ ಬಿಸಿ ತಟ್ಟಿತು. ಇನ್ನು, ಸಂಚಾರ ದಟ್ಟಣೆ ನಡುವೆ ಸಿಲುಕಿದ್ದ ಆಂಬುಲೆನ್ಸ್ ಗಳಿಗೆ ಕಾರ್ಮಿಕರೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದರು.