ಭದ್ರಾವತಿಯಲ್ಲಿ ಡಬಲ್‌ ಮರ್ಡರ್‌, 25 ವರ್ಷದ ಯುವಕ, 65 ವರ್ಷದ ವ್ಯಕ್ತಿಯ ಹತ್ಯೆ, ಕಾರಣವೇನು?

 ಶಿವಮೊಗ್ಗ  LIVE 

ಭದ್ರಾವತಿ: ಪ್ರೇಮಿಗಳ ಪರ ಮಾತನಾಡಿದ್ದಕ್ಕೆ ಮಾರಕಾಸ್ತ್ರದಿಂದ ಇರಿದು ಇಬ್ಬರ ಹತ್ಯೆ (Two killed ) ಮಾಡಲಾಗಿದೆ. ಭದ್ರಾವತಿಯ ಹಳೆ ನಗರದಲ್ಲಿ ಘಟನೆ ಸಂಭವಿಸಿದೆ.

ಭದ್ರಾವತಿ ಹಳೆ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಜೈ ಭೀಮ್ ನಗರದಲ್ಲಿ ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮೃತರನ್ನು ಕಿರಣ್ (25) ಮತ್ತು ಮಂಜುನಾಥ್ (65) ಎಂದು ಗುರುತಿಸಲಾಗಿದೆ.

two killed in bhadravathi

ಪ್ರೇಮಿಗಳ ಪರ ನಿಂತಿದ್ದಕ್ಕೆ ಕೃತ್ಯ

ಘಟನೆ ಸಂಬಂಧ ಮಾಧ್ಯಮಗಳಿಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರ ಜಿ.ಕೆ.ಮಿಥುನ್‌ ಕುಮಾರ್‌, ‘ಎರಡು ದಿನದ ಹಿಂದೆ ನಂದೀಶ್ ಮತ್ತು ಸೃಷ್ಟಿ ಎಂಬವವರು ನಾಪತ್ತೆಯಾಗಿದ್ದರು. ಇಂದು ಸಂಜೆ ಅವರು ಪೊಲೀಸ್ ಠಾಣೆಗೆ ವಾಪಸ್ ಬಂದಿದ್ದರು. ಸೃಷ್ಟಿ ತಾನು ನಂದೀಶ್‌ನೊಂದಿಗೇ ಇರುವುದಾಗಿ ಹೇಳಿದ್ದರು. ಇದರಿಂದ ಕೋಪಗೊಂಡ ಸೃಷ್ಟಿಯ ಸಹೋದರ ಮತ್ತು ಅವನ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೊಲೀಸರ ದಾಳಿ, ಸಾಗರದ ವ್ಯಕ್ತಿ ಅರೆಸ್ಟ್‌, ಕಾರಣವೇನು?

‘ಪ್ರೇಮಿಗಳಿಗೆ ಬೆಂಬಲವಾಗಿದ್ದಾರೆ ಎಂದು ಭಾವಿಸಿ ಕಿರಣ್‌ ಮೇಲೆ ಹಲ್ಲೆ ನಡೆಸಲಾಗಿದೆ. ಇನ್ನು , ಗುಂಪುಗಳ ನಡುವಿನ ಜಗಳ ಬಿಡಿಸಿದ ಮಂಜುನಾಥ್‌ ಎಂಬುವವರ ಮೇಲೂ ದಾಳಿ ಮಾಡಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment