VISL ಕಾರ್ಮಿಕರ ಸಂಘದ ಚುನಾವಣೆ, ಅಧ್ಯಕ್ಷರಾಗಿ ಜಗದೀಶ್ ಮರು ಆಯ್ಕೆ, ಉಪಧ್ಯಾಕ್ಷರ ಅಧಿಕಾರವಧಿಗೆ ಲಾಟರಿ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 6 APRIL 2021

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)‌ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಜೆ.ಜಗದೀರ್‌ ಪುನರಾಯ್ಕೆ ಆಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಜಗದೀಶ್‌ ಅತಿ ಹೆಚ್ಚು ಮತಗಳ ಗಳಿಸಿ, ಜಯಗಳಿಸಿದ್ದಾರೆ.

167562732 1361386974222719 6964369876986295284 n.jpg? nc cat=108&ccb=1 3& nc sid=730e14& nc ohc=BfNbcg7sbN0AX8R8Fq & nc ht=scontent.fblr1 4

ಯಾರಿಗೆ ಎಷ್ಟೆಷ್ಟು ಮತ ಬಂದಿದೆ?

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ.ಜಗದೀಶ 117 ಮತ ಗಳಿಸಿದ್ದಾರೆ. ಪ್ರತಿಸ್ಪರ್ದಿ ಶ್ರೀನಿವಾಸ್ 63, ಸುರೇಶ್‌ 38 ಮತಗಳನ್ನು ಗಳಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಸಮ ಮತ

ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರಿಗೂ ಸಮ ಮತಗಳು ಲಭಿಸಿದೆ. ಎಎಲ್‌ಡಬ್ಲು ಕುಮಾರ್‌ ಮತ್ತು ಶೈಲಶ್ರೀ ಅವರು ತಲಾ 89 ಮತಗಳನ್ನು ಪಡೆದಿದ್ದಾರೆ. ಲಾಟರಿ ಮೂಲಕ ಅಧಿಕಾರವಧಿಯನ್ನು ಆಯ್ಕೆ ಮಾಡಲಾಗಿದೆ. ಮೊದಲ 18 ತಿಂಗಳು ಕುಮಾರ್‌ ಮತ್ತು ಎರಡನೇ ಅವಧಿಗೆ ಶೈಲಶ್ರೀ ಅವರು ಉಪಾಧ್ಯಕ್ಷರಾಗಿ ಅಧಿಕಾರ ನಡೆಸಲಿದ್ದಾರೆ.

ಇನ್ನು, ಪ್ರಧಾನ ಕಾರ್ಯದರ್ಶಿಯಾಗಿ ಯು.ಎ.ಬಸಂತಕುಮಾರ್‌, ಕಾರ್ಯದರ್ಶಿಯಾಗಿ ಕೆ.ಆರ್‌.ಮನು, ಖಚಾಂಚಿಯಾಗಿ ಎಸ್.ಮೋಹನ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಯೋಗೇಶ್, ಮನೋಹರನ್, ಕುಮಾರಸ್ವಾಮಿ, ಸುನಿಲ್, ಮಂಜುನಾಥ್, ಪಿ.ರಾಜು ಅವರು ಕಾರ್ಯಕರಿ ಸಮಿತಿಯಲ್ಲಿದ್ದಾರೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

Leave a Comment