ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021
ಉಂಬ್ಳೆಬೈಲು ವ್ಯಾಪ್ತಿಯ ಹುಣಸೆಕಟ್ಟೆ ಜಂಕ್ಷನ್’ನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಇಲ್ಲಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಳವಾಗಿದೆ.
ಬೆಳೆ ಹಾನಿ, ಜನರಲ್ಲಿ ಭೀತಿ
ಹುಣಸೆಕಟ್ಟೆ ಜಂಕ್ಷನ್’ನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೇರಿದ ಜಮೀನಿನ ಕಾಂಪೌಂಡ್’ಗೆ ಕಾಡಾನೆ ಹಾನಿ ಮಾಡಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಯೋಗೇಶ್ ಅವರಿಗೆ ಸೇರಿದ ಜಮೀನಿಗೂ ಕಾಡಾನೆ ನುಗ್ಗಿದೆ.
ಇಲ್ಲಿನ ವಿವಿಧೆಡೆ ಜಮೀನಿಗೆ ನುಗ್ಗಿ ತೆಂಗು, ಬಾಳೆ, ಅಡಕೆ, ಸಿಲ್ವರ್ ಮರಗಳ ಬೆಳೆಯನ್ನು ಹಾನಿ ಮಾಡಿದೆ. ಕಾಡಾನೆ ಪ್ರತ್ಯಕ್ಷವಾಗಿರುವ ವಿಚಾರ ತಿಳಿದು ಸ್ಥಳೀಯರಲ್ಲಿ ಆತಂಕ ಮೂಡಿದೆ. ಮತ್ತಷ್ಟು ಬೆಳೆ ಹಾನಿ ಉಂಟು ಮಾಡಬಹುದು ಎಂಬ ಭೀತಿ ಎದುರಾಗಿದೆ.
ಇನ್ನು, ಒಂಟಿ ಸಲಗವನ್ನು ಹುಡುಕಿ, ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅರಣ್ಯದ ಸುತ್ತಲು ಟ್ರಂಚ್ ಹೊಡೆದಿದ್ದರೆ ಕಾಡಾನೆ ಈ ಭಾಗಕ್ಕೆ ಬರುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತವಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200