ಕನಸಿನಕಟ್ಟೆಯಲ್ಲಿ ವಿದ್ಯುತ್‌ ಶಾಕ್‌ಗೆ ಯುವಕ ಸಾವು, ಹೇಗಾಯ್ತು ಘಟನೆ?

SHIVAMOGGA LIVE NEWS, 6 JANUARY 2025

ಹೊಳೆಹೊನ್ನೂರು : ಪಂಪ್‌ಸೆಟ್‌ ಸ್ವಿಚ್‌ ಆಫ್‌ ಮಾಡಲು ತೆರಳಿದ್ದಾಗ ವಿದ್ಯುತ್‌ ಪ್ರವಹಿಸಿ (Electricity) ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಕನಸಿನಕಟ್ಟೆ ಗ್ರಾಮದ ದರ್ಶನ್‌ (20) ಮೃತ ಯುವಕ. ಭಾನುವಾರ ಸಂಜೆ ತಮ್ಮ ಜಮೀನಿನಲ್ಲಿ ಘಟನೆ ಸಂಭವಿಸಿದೆ.

ನೀರು ಹಾಯಿಸಲು ದರ್ಶನ್‌ ತಮ್ಮ ತೋಟಕ್ಕೆ ತೆರಳಿದ್ದರು. ಈ ಸಂದರ್ಭ ಪಂಪ್‌ಸೆಟ್‌ನ ಸ್ವಿಚ್‌ ಆಫ್‌ ಮಾಡುವಾಗ ವಿದ್ಯುತ್‌ ಶಾಕ್‌ ತಗುಲಿದೆ ಎಂದು ಹೇಳಲಾಗುತ್ತಿದೆ. ನೆರೆಹೊರೆ ಜಮೀನಿನವರು ಇದನ್ನು ಗಮನಿಸಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Kanasinakatte-Youth-Darshan-succumbed Electricity

ಇದನ್ನೂ ಓದಿ » ರಾತ್ರಿ ನಡೆದು ಹೋಗುತ್ತಿದ್ದ ಮಹಿಳೆಗೆ ಕಾದಿತ್ತು ಆಘಾತ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment