ಶಿವಮೊಗ್ಗ ಲೈವ್
ರಿಪ್ಪನ್‌ಪೇಟೆ: ಹೊಂಬುಜ ಕ್ಷೇತ್ರದಲ್ಲಿ ವಿಶ್ವ ಶಾಂತಿ ಯುವ ಸೇವಾ ಸಮಿತಿಯಿಂದ ಜಿನ ಸಹಸ್ರ ನಾಮಾರ್ಚನೆಯ (Jina Namasmarane) ಪೂಜೆ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು. ಹೊಂಬುಜ ಜೈನ ಮಠಾಧೀಶರಾದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರದನ್ವಯ ಪೂಜೆಗಳನ್ನು ಸಲ್ಲಿಸಲಾಯಿತು.
ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?
ಬಳಿಕ ಆಶೀರ್ವಚನ ನೀಡಿದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿನನಾಮ ಸ್ತುತಿಸುವುದೆಂದರೆ ಕರ್ಮಕ್ಷಯ ಮಾಡಿದಂತಾಗುವುದು. ಆತೋನ್ನತಿಯ ನೈಜ ಸನ್ಮಾರ್ಗವು ಜಿನ ಸಹಸ್ರನಾಮ ಅರ್ಚನೆಯ ಮೂಲಕ ದೊರೆಯಲಿದೆ ಎಂದರು.

ಈ ಸುದ್ದಿಯನ್ನೂ ಓದಿ
ಹೊಸನಗರದ ಶಿಕ್ಷಕಿಗೆ ರಾಷ್ಟ್ರಪ್ರಶಸ್ತಿ, ಯಾರದು? ಮಿನಿಸ್ಟರ್ ಏನಂದ್ರು?
ಪದ್ಮಾವತಿ ಮಹಿಳಾ ಮಂಡಲ ಸದಸ್ಯರು, ಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಭಕ್ತರು ಹಾಜರಿದ್ದರು. ವಿಶ್ವ ಸೇವಾ ಯುವ ಸಮಿತಿ ಬೆಂಗಳೂರು ಹಾಗೂ ವಿವಿಧ ಜೈನ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಏಕಕಾಲದಲ್ಲಿ ನಡೆದ 1.11ಕೋಟಿ ಜಿನ ನಾಮಸ್ಮರಣೆ ದಾಖಲೆಗೆ ಸೇರ್ಪಡೆಯಾಯಿತು.
