ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಹೊಸನಗರ: ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ (Padayatra) ನಡೆಯಿತು. ಹೊಸನಗರ ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ, ಹೊಸನಗರ ವಿಧಾನಸಭಾ ಕ್ಷೇತ್ರದ ಸ್ತಬ್ಧ ಚಿತ್ರಕ್ಕೆ ಚಾಲನೆ ನೀಡುವ ಮೂಲಕ ಪಾದಯಾತ್ರೆ ಆರಂಭಿಸಲಾಯಿತು.
ಇಲ್ಲಿದೆ ಪಾದಯಾತ್ರೆ ಹೈಲೈಟ್ ಪಾಯಿಂಟ್ಸ್
1 ಬೆಳಗ್ಗೆ 9ಕ್ಕೆ ಚಿಕ್ಕಪೇಟೆಯ ಗಣಪತಿ ದೇವರ ಸನ್ನಿಧಿಯಲ್ಲಿ ಪಾದಯಾತ್ರೆಗೆ ಚಾಲನೆ ದೊರೆಕಿತು. ಬೆಳಗ್ಗೆ 10 ಗಂಟೆಗೆ ನಗರದಿಂದ ಹೊರಟ ಪಾದಯಾತ್ರೆಯಲ್ಲಿ ಐನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು, ಕೂಲಿಕಾರ್ಮಿಕರೂ ಹೆಜ್ಜೆಹಾಕಿದರು.2 ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಬಿ.ಸ್ವಾಮಿರಾವ್ ನೇತೃತ್ವದಲ್ಲಿ ಸ್ತಬ್ಧಚಿತ್ರಗಳು, ವಾದ್ಯಗಳೊಂದಿಗೆ ಪಾದಯಾತ್ರೆಯ ಸಾಗಿತು. ಶ್ರೀಗಳು ಮತ್ತು ಸ್ವಾಮೀರಾವ್ ಅವರು 17ಕಿ.ಮೀ. ದೂರ ನಡೆದು ಗಮನ ಸೆಳೆದರು.
ಇದನ್ನೂ ಓದಿ : ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್, ಏನಿದು?
ಸಭೆಯಲ್ಲಿ ಯಾರೆಲ್ಲ ಏನೇನು ಹೇಳಿದರು?
ನಗರದ ಚಿಕ್ಕಪೇಟೆ ವೃತ್ತದಲ್ಲಿ ಸಂಜೆ ಸಭೆ ನಡೆಯಿತು. ಈ ಸಂದರ್ಭ ಪ್ರಮುಖರು ಮಾತನಾಡಿದರು. ಯಾರೆಲ್ಲ ಏನೇನು ಹೇಳಿದರು? ಇಲ್ಲಿದೆ ವಿವರಣೆ.

ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹಾಲಗದ್ದೆ ಉಮೇಶ್, ಎನ್.ಆರ್. ದೇವಾನಂದ್, ಕೆ.ವಿ. ಕೃಷ್ಣಮೂರ್ತಿ, ಆಲುವಳ್ಳಿ ವೀರೇಶ್, ಬಿ.ಜಿ. ಚಂದ್ರಮೌಳಿ ಗೌಡ, ರಮೇಶ ಹಲಸಿನಹಳ್ಳಿ, ಕರುಣಾಕರ ಶೆಟ್ಟಿ, ಸುಮಾ ಸುಬ್ರಹ್ಮಣ್ಯ ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಸತೀಶ್, ಅಂಬ್ರಯ್ಯಮಠ, ಚಕ್ರವಾಕ ಸುಬ್ರಹ್ಮಣ್ಯ, ಸುಧೀಂದ್ರ ಪಂಡಿತ್, ಆರ್.ಎ. ಚಾಬುಸಾಬ್, ವರ್ತೇಶ್, ನಗರ ನಿತಿನ್, ನರ್ತಿಗೆ ಸುರೇಶ್, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ವಿವಿಧ ಪಕ್ಷಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪತ್ರಕರ್ತ ರವಿ ಬಿದನೂರು ಕಾರ್ಯಕ್ರಮ ನಿರ್ವಹಿಸಿದರು.

ಇವತ್ತು ಎರಡನೇ ದಿನದ ಪಾದಯಾತ್ರೆ
ಇನ್ನು ಇವತ್ತು ಎರಡನೇ ದಿನದ ಪಾದಯಾತ್ರೆ ನಡೆಯಲಿದೆ. ಹೊಸನಗರದಿಂದ ಆರಂಭಗೊಂಡು ರಿಪ್ಪನ್ಪೇಟೆ ವರೆಗೆ ಮುಂದುವರಿಯಲಿದೆ. ಇವತ್ತೂ ದೊಡ್ಡ ಸಂಖ್ಯೆಯ ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

LATEST NEWS
- ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

- ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

- ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

- ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

- ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್, ಏನಿದು?

About The Editor
ನಿತಿನ್ ಆರ್.ಕೈದೊಟ್ಲು









