ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JANUARY 2024
ಹೊಸನಗರ : ಕ್ಷುಲಕ ವಿಚಾರಕ್ಕೆ ಸ್ನೇಹಿತರ (Friends) ಮಧ್ಯೆ ಗಲಾಟೆಯಾಗಿದ್ದು ಬಿಡಿಸಲು ಹೋದ ಸಂಬಂಧಿಗೆ ರೇಜರ್ನಿಂದ ಇರಿಯಲಾಗಿದೆ. ಗಾಯಾಗೊಂಡಿರುವ ಯುವಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊಸನಗರ ತಾಲೂಕು ಕೇಶವಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಎಂಬಾತನ ಹೊಟ್ಟೆಗೆ ರೇಜರ್ನಿಂದ ಇರಿಯಲಾಗಿದೆ. ರಘು ಮತ್ತು ಆತನ ಸ್ನೇಹಿತ ಮಧ್ಯೆ ವೈಮನಸು ಉಂಟಾಗಿತ್ತು. ಮಾತುಕತೆ ವೇಳೆ ರಘುಗೆ ಆತನ ಸ್ನೇಹಿತ ಹೊಡೆಯಲು ಬಂದಾಗ ರಘುವಿನ ಸಂಬಂಧಿ ಕಾರ್ತಿಕ್ ತಡೆದಿದ್ದಾನೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಉದ್ಯಮಿಗೆ ಸಂಕಷ್ಟ ತಂದ ವಾಟ್ಸಪ್ ಗ್ರೂಪ್, ಆಗಿದ್ದೇನು?
ರಘುವಿನ ಸ್ನೇಹಿತ ತನ್ನ ಜೇಬಿನಲ್ಲಿದ್ದ ರೇಜರ್ನಿಂದ ಕಾರ್ತಿಕ್ಗೆ ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳು ಕಾರ್ತಿಕ್ಗೆ ಹೊಸನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲ ಮಾಡಲಾಗಿದೆ. ಹೊಸನಗರ ಠಾಣೆಯಲ್ಲಿ ಪ್ರವೀಣ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422