SHIVAMOGGA LIVE NEWS | 4 JANUARY 2024
ಶಿವಮೊಗ್ಗ : ಪ್ರತಿಷ್ಠಿತ ಹೂಡಿಕೆ ಸಂಸ್ಥೆಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ (Businessman) 20 ಲಕ್ಷ ರೂ. ಹಣ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರ ಮೊಬೈಲ್ ನಂಬರ್ ಅನ್ನು ಹೂಡಿಕೆಗೆ ಸಂಬಂಧಿಸಿದ ವಾಟ್ಸಪ್ ಗ್ರೂಪ್ಗೆ ಜಾಯಿನ್ ಮಾಡಲಾಗಿತ್ತು. ಅಲ್ಲಿ ಬಂದ APK ಫೈಲ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಭರ್ತಿ ಮಾಡುವಂತೆ ತಿಳಿಸಲಾಗಿತ್ತು. ಅಂತೆಯೇ ಉದ್ಯಮಿ ಅರ್ಜಿ ಭರ್ತಿ ಮಾಡಿದ ನಂತರ ಅವರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಹಂತ ಹಂತವಾಗಿ 20 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ ಅಸಲು ಹಿಂತಿರುಗಿಸದೆ, ಲಾಭವು ದೊರೆಯದೆ ಇದ್ದಾಗ ಅನುಮಾನ ಮೂಡಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ಯುದ್ಧ ಟ್ಯಾಂಕರ್ಗೆ ಕೊನಗೂ ಸಿಕ್ತು ‘ಫ್ರೀಡಂ’, ಇದು ಶಿವಮೊಗ್ಗ ಲೈವ್.ಕಾಂ ಇಂಪ್ಯಾಕ್ಟ್