ಹುಲಿಕಲ್‌ ಘಾಟಿಯಲ್ಲಿ ಡಿಸೇಲ್‌ ಖಾಲಿಯಾಗಿ ನಿಂತ KSRTC ಬಸ್‌, ಕೆಲಕಾಲ ಸಂಚಾರ ಅಸ್ತವ್ಯಸ್ತ

ಹೊಸನಗರ: ಡಿಸೇಲ್‌ (Diesel) ಖಾಲಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಹುಲಿಕಲ್‌ ಘಾಟಿ ತಿರುವಿನ ಸಮೀಪ ನಿಂತಿತ್ತು. ಇದರಿಂದ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಇದನ್ನೂ ಓದಿ » ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಆಟೋಗಳಿಗೆ ನಿಷೇಧ, ಕಾರಣವೇನು? ಈಗ ಹೇಗಿದೆ ವ್ಯವಸ್ಥೆ?

ಶಿವಮೊಗ್ಗ ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹುಲಿಕಲ್‌ ಘಾಟಿಯ ಮುಖ್ಯ ತಿರುವಿನಲ್ಲಿ ಡಿಸೇಲ್‌ ಖಾಲಿಯಾಗಿ ನಿಂತಿತ್ತು. ಘಾಟಿ ರಸ್ತೆ ಕಿರಿದಾಗಿದ್ದು ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರು, ಸಣ್ಣ ಗೂಡ್ಸ್‌ ವಾಹನಗಳು ಮಾತ್ರ ಬಸ್ಸನ್ನು ದಾಟಿ ಹೋಗಲು ಸಾಧ್ಯವಾಗಿತ್ತು.

Shivamogga Live Promotion

Bus-Stops-between-hulikal-ghat-traffic-jam
ಹುಲಿಕಲ್‌ ಘಾಟಿಯಲ್ಲಿ ಡಿಸೇಲ್‌ ಖಾಲಿಯಾಗಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌

ಸ್ವಲ್ಪ ಹೊತ್ತಿನ ಬಳಿಕ ಮಾಸ್ತಿಕಟ್ಟೆಯಿಂದ ಡಿಸೇಲ್‌ ವ್ಯವಸ್ಥೆ ಮಾಡಲಾಯಿತು. ಬಹು ಹೊತ್ತು ನಡುರಸ್ತೆಯಲ್ಲೇ ಬಸ್‌ ನಿಂತಿದ್ದರಿಂದ ಹುಲಿಕಲ್‌ ಘಾಟಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

Bus-Stops-between-hulikal-ghat-traffic-jam
ಕೆಎಸ್‌ಆರ್‌ಟಿಸಿ ಬಸ್‌ ಪಕ್ಕದಲ್ಲಿ ಹಾದು ಹೋಗುತ್ತಿರುವ ಕಾರು.
Bus-Stops-between-hulikal-ghat-traffic-jam
ಹುಲಿಕಲ್‌ ಘಾಟಿಯಲ್ಲಿ ನಿಧಾನವಾಗಿ ಸಾಗುತ್ತಿದ್ದ ವಾಹನಗಳು.

June-2025-Report-Shivamogga-Live-New-New.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment