ಕೆರೆಗೆ ಉರುಳಿದ ಕಾರು, ತ್ಯಾಗರ್ತಿಯ ಮಹಿಳೆ ಸಾವು, ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಸ್ಥಳೀಯರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಕಾರು (CAR) ಕೆರೆಗೆ ಉರುಳಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ರಿಪ್ಪನ್‌ಪೇಟೆಯ ಚಿಪ್ಪಿಗರ ಕೆರೆಗೆ ಇವತ್ತು ಕಾರು ಉರುಳಿದೆ. ಕಾರಿನಲ್ಲಿದ್ದ ತ್ಯಾಗರ್ತಿಯ ಪಾರ್ವತಮ್ಮ (65) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಯುವಕ ಮತ್ತು ಯುವತಿಯನ್ನು ರಕ್ಷಿಸಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಅಮ್ಮನಘಟ್ಟದಿಂದ ವಾಪಸ್‌ ಬರುತ್ತಿದ್ದರು

ಕಾರಿನಲ್ಲಿದ್ದವರು ಅಮ್ಮನಘಟ್ಟದಿಂದ ತ್ಯಾಗರ್ತಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಚಿಪ್ಪಗರ ಕೆರೆ ಬಳಿ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳೀಯರಾದ ಗಿರೀಶ್ , ಇಮ್ರಾನ್ ಹಾಗೂ ಮುತ್ತಲೀಬ್ ಜೀವದ ಹಂಗು ತೊರೆದು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಆ ವೇಳೆಗಾಗಲೇ ಪಾರ್ವತಮ್ಮ ಅವರು ಅಸುನೀಗಿದ್ದರು ಎಂದು ತಿಳಿದು ಬಂದಿದೆ.

Car-drowned-in-a-lake-near-ripponpete

ಗಾಯಾಳುಗಳನ್ನು ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿತ್ತು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

JNNCE-Admission-Advt-scaled

ಇದನ್ನೂ ಓದಿ » ಪ್ರಧಾನಿ ಮೋದಿ 75ನೇ ಜನ್ಮದಿನ, ಶಿವಮೊಗ್ಗ ಜಿಲ್ಲೆಯ ಏಳು ಕಡೆ ಆರೋಗ್ಯ ಶಿಬಿರ, ಎಲ್ಲೆಲ್ಲಿ ಯಾವಾಗ ನಡೆಯಲಿದೆ?

Car Drowned in a lake near ripponpete

Leave a Comment