ಶಿವಮೊಗ್ಗ ಲೈವ್.ಕಾಂ | NR PURA | 08 ಡಿಸೆಂಬರ್ 2019
ಹೊಸನಗರ ತಾಲೂಕು ತಹಶೀಲ್ದಾರ್ ಸೇರಿ ಎಳು ಮಂದಿ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ನಿರೀಕ್ಷಕ ಆತ್ಮಹತ್ಯೆಗೆ ಇವರ ಕಿರುಕುಳವೆ ಕಾರಣ ಎಂದು ಕುಟುಂಬ ಆರೋಪಿಸಿದ್ದರಿಂದ ಪ್ರಕರಣ ದಾಖಲಾಗಿದೆ.
ಹೊಸನಗರ ತಾಲೂಕು ಕಚೇರಿ ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೇಯ (60) ಅವರು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬ ಸೇತುವೆ ಸಮೀಪ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದತ್ತಾತ್ರೇಯ ಅವರು ಮೂಲತಃ ಭದ್ರಾವತಿ ತಾಲೂಕು ಕೆಂಚೇನಹಳ್ಳಿ ಕಾಲೋನಿ ನಿವಾಸಿಯಾಗಿದ್ದರು.
ಇನ್ನೆರಡೇ ತಿಂಗಳು ಇದ್ದಿದ್ದು
ದತ್ತಾತ್ರೇಯ ಅವರ ಸೇವಾವಧಿ ಇನ್ನೆರಡೇ ತಿಂಗಳಿತ್ತು. ಆದರೆ ಶನಿವಾರ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಆಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದವರು ಬೆಳಗ್ಗೆ 10 ಗಂಟೆ ಹೊತ್ತಿಗೆ ಪತ್ನಿಗೆ ಕರೆ ಮಾಡಿದ್ದರು. ತಾವು ಮನೆ ಮರಳುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಆತಂಕಕ್ಕೀಡಾದ ಕುಟುಂಬದವರು ದತ್ತಾತ್ರೇಯ ಅವರನ್ನು ಹುಡುಕಿಕೊಂಡು ಮುಡುಬ ಸೇತುವೆ ಬಳಿ ಬರುವ ಹೊತ್ತಿಗೆ ಅವರ ಮೃತದೇಹ ತುಂಗಾ ನದಿಯಲ್ಲಿತ್ತು.
ಏಳು ಮಂದಿ ವಿರುದ್ಧ ಎಫ್ಐಆರ್
ದತ್ತಾತ್ರೇಯ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹೊಸನಗರ ತಹಶೀಲ್ದಾರ್ ಸೇರಿದಂತೆ ಏಳು ಮಂದಿಯ ಕಿರುಕುಳವೆ ಕಾರಣ ಎಂದು ಅವರ ಕುಟುಂಬ ಆರೋಪಿಸಿದೆ. ಹಾಗಾಗಿ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೊಸನಗರ ತಹಶೀಲ್ದಾರ್ ಶ್ರೀಧರಮೂರ್ತಿ, ಆನಂದ ಕಾರ್ವೆ, ನಾಗೇಂದ್ರ, ವಿಠಲ, ಮುರುಗೇಶ, ಶಶಿಕಲಾ, ವನಜಾಕ್ಷಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ದತ್ತಾತ್ರೇಯ ಅವರ ಪತ್ನಿ ಅನುಸೂಯ ಅವರು ದೂರು ನೀಡಿದ್ದಾರೆ. ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
A complaint has been registered against Hosanagara Tahasildha and six others over the suicide of Food Inspector. Dattatreya (60) committed suicide near Muduba Bridge in NR Pura.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200