ವಿದ್ಯಾರ್ಥಿನಿ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸಿದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು

ರಿಪ್ಪನ್‌ಪೇಟೆ: ಬೆಳ್ಳೂರು ಗ್ರಾಮ ಪಂಚಾಯಿತಿಯ ಹಿರೇಸಾನಿ ಗ್ರಾಮಕ್ಕೆ ನಡೆದು ತೆರಳುತ್ತಿದ್ದಾಗ ಮರದ ರೆಂಬೆ ಮುರಿದುಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ನೀಲಾವತಿಯ ಚಿಕಿತ್ಸೆಗೆ ಸಹಪಾಠಿಗಳು, ಉಪನ್ಯಾಸಕರು ನೆರವಾಗಿದ್ದಾರೆ.

ನೀಲಾವತಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ವೆಚ್ಚಕ್ಕೆ ಗರ್ತಿಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನೀಲಾವತಿ ಅವರ ಕುಟುಂಬಕ್ಕೆ ಕಾಲೇಜಿನ ಸಮಿತಿ, ಉಪನ್ಯಾಸಕರು ಹಾಗೂ ಸಹಪಾಠಿಗಳು ದೇಣಿಗೆ ಸಂಗ್ರಹಿಸಿ ನೆರವು ನೀಡಿದ್ದಾರೆ. ವಿದ್ಯಾರ್ಥಿನಿಯ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿರುವುದನ್ನು ಅರಿತ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಒಟ್ಟು ₹32,600 ದೇಣಿಗೆ ಸಂಗ್ರಹಿಸಿದ್ದಾರೆ. ಮಂಗಳವಾರ ಗಾಯಾಳು ವಿದ್ಯಾರ್ಥಿನಿಯ ಪಾಲಕರಿಗೆ ಈ ಹಣವನ್ನು ಹಸ್ತಾಂತರಿಸಲಾಯಿತು.

Tree-Branch-falls-on-Student-at-Belluru-near-ripponpete.