ಶಿವಮೊಗ್ಗ ಲೈವ್.ಕಾಂ | 25 ಮಾರ್ಚ್ 2019
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಹೊಸನಗರ ತಾಲೂಕಿನ ಗ್ರಾಮ ಪಂಚಾಯಿತಿ ಒಂದರ ಉಪಾಧ್ಯಕ್ಷರು, ಪಂಚಾಯಿತಿ ಕಚೇರಿ ಮುಂದಿರುವ ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಧಿಕಾರಿಗಳು, ಜನರು ಎಷ್ಟೇ ಮನವೊಲಿಸಿದರು, ಹಣ ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಅಂತಾ ತಿಳಿಸಿದ್ದಾರೆ.

ತಾಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಅನುದಾನ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಮರವೇರಿ ಕುಳಿತಿದ್ದಾರೆ.
ಒಂದು ವಾರವಾದರೂ ಇಲ್ಲೇ ಇರ್ತೀನಿ
ಮೂಡುಗೊಪ್ಪ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 29 ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲು ಅನುಮತಿ ಸಿಕ್ಕಿತ್ತು. ಈ ಪೈಕಿ ಕೆಲವರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ‘ಫಲಾನುಭವಿಗಳಲ್ಲಿ ಒಂದಿಬ್ಬರು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಹಣಕ್ಕಾಗಿ ಅವರು ಪಂಚಾಯಿತಿಗೆ ಹತ್ತಿಪ್ಪತ್ತು ಸರಿ ಓಡಾಡಿದ್ದಾರೆ. ಅದರೂ ಹಣ ಬಿಡುಗಡೆಯಾಗಿಲ್ಲ. ಮೊನ್ನೆ ನಾನೇ ಹೋಗಿ ಕಾಲಿಗೆ ಬೇಕಾರೂ ಬೀಳ್ತೀನಿ ಹಣ ಬಿಡುಗಡೆ ಮಾಡಿ ಅಂದಿದ್ದೆ. ಇವತ್ತು ಹಣ ಹಾಕುವುದಾಗಿ ಹೇಳಿದ್ದರು. ಆದರೆ ಬ್ಯಾಂಕ್’ಗೆ ಹೋಗಿ ಪರಿಶೀಲಿಸಿದಾಗ ದುಡ್ಡು ಬಂದಿರಲಿಲ್ಲ’ ಅಂತಾರೆ ಕರುಣಾಕರ ಶೆಟ್ಟಿ.

ಅಧಿಕಾರಿಗಳು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿ, ಅವರ ಪಾಸ್‘ಬುಕ್ ಜೆರಾಕ್ಸ್ ಪ್ರತಿ ತಂದು ತೋರಿಸುವವರೆಗೂ ಮರದಿಂದ ಕೆಳಗಿಳಿಯುವುದಲ್ಲ. ಒಂದು ವಾರವಾದರೂ ಇಲ್ಲಿಯೇ ಇರುತ್ತೇನೆ ಅಂತಾ ಶಿವಮೊಗ್ಗ ಲೈವ್.ಕಾಂಗೆ ಕರುಣಾಕರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
LATEST NEWS
- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

About The Editor
ನಿತಿನ್ ಆರ್.ಕೈದೊಟ್ಲು




