ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 4 JULY 2023
SHIMOGA : ಜಿಲ್ಲೆಯಾದ್ಯಂತ ಸಂಜೆ ವೇಳೆ ಜೋರು (Heavy Rain) ಮಳೆಯಾಗುತ್ತಿದೆ. ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ವಿವಿಧೆಡೆ, ಶಿವಮೊಗ್ಗದ ಕೆಲವು ಕಡೆ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಬಿದರಗೋಡು, ಹೊನ್ನೇತಾಳು, ಅರೇಹಳ್ಳಿ, ಕಮ್ಮರಡಿ, ತೀರ್ಥಮತ್ತೂರು, ಹೊಸಹಳ್ಳಿ, ಮೇಗರವಳ್ಳಿ. ಹೊಸನಗರ ತಾಲೂಕಿನ ಸುಳಗೋಡು, ನಗರ, ಹೊಸೂರು ಸಂಪೇಕಟ್ಟೆಯಲ್ಲಿ ಭಾರಿ ಮಳೆಯಾಗುತ್ತಿರುವ (Heavy Rain) ವರದಿಯಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ ಎರಡು ದಿನ ಆರೆಂಜ್ ಅಲರ್ಟ್, ಇನ್ನೆರಡು ದಿನ ಯಲ್ಲೋ ಅಲರ್ಟ್
ತೀರ್ಥಹಳ್ಳಿಯ ಸಾಲ್ಗಡಿ, ಮಾಳೂರು, ಭಾಂಡ್ಯ ಕುಕ್ಕೆ, ಬೆಜ್ಜವಳ್ಳಿ, ಕುಡುಮಲ್ಲಿಗೆ, ಹೊದಲ ಅರಳಾಪುರ, ಆರಗ, ನೊಣಬೂರು, ದೇಮ್ಲಾಪುರ, ತ್ರಿಯಂಬಕಪುರ, ಮಂಡಗದ್ದೆ, ಹಣಗೆರೆಯಲ್ಲಿ ಸಂಜೆಯಿಂದ ಜೋರು ಮಳೆ ಆರಂಭವಾಗಿದೆ. ಹೊಸನಗರದ ಬೆಳ್ಳೂರು, ಅಮೃತ, ಸೋನಲೆ, ತ್ರಿಣಿವೆ, ಮಂಬಾರು, ಕೋಡುರು, ಚಿಕ್ಕಜೇನಿ, ಬಾಳೂರು, ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೋರು ಮಳೆ ಸುರಿಯುತ್ತಿದೆ.
ಇದನ್ನೂ ಓದಿ – ಕಳೆದ 24 ಗಂಟೆಯಲ್ಲಿ ಸಾಗರದಲ್ಲಿ ಹೆಚ್ಚು ಮಳೆ, ಉಳಿದ ತಾಲೂಕುಗಳಲ್ಲಿ ಎಷ್ಟಾಗಿದೆ ವರ್ಷಧಾರೆ?
ಸಾಗರದ ಆಚಾಪುರ, ಆನಂದಪುರಂ, ಭೀಮನಕೋಣೆ, ಕಲ್ಮನೆ, ಭೀಮನೇರಿ, ಕೆಳದಿ, ತ್ಯಾಗರ್ತಿಯಲ್ಲಿ ಜೋರು ಮಳೆಯಾಗುತ್ತಿರವುದಾಗಿ ವರದಿಯಾಗಿದೆ. ಶಿವಮೊಗ್ಗದ ಸಂತೆ ಕಡೂರು, ಬಿದರೆ ವ್ಯಾಪ್ತಿಯಲ್ಲಿ ಮಳೆ ಜೋರಿದೆ. ಭದ್ರಾವತಿ ತಾಲೂಕಿನಾದ್ಯಂತ ಸಾಧಾರಣೆ ಮಾಳೆಯಾಗುತ್ತಿದೆ. ಶಿಕಾರಿಪುರ, ಸೊರಬ ತಾಲೂಕಿನಲ್ಲಿ ಸಾಮಾನ್ಯ ಮಳೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422