ಜಲಾಶಯ ಮಾಹಿತಿ: ಮಾಣಿ, ಪಿಕ್‌ಅಪ್, ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ. ಇನ್ನು, ಹೊಸನಗರ ಭಾಗದಲ್ಲಿ ಸುರಿದ ಮಳೆ ಮಾಹಿತಿ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಹೊಸನಗರ ತಾಲ್ಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಹುಲಿಕಲ್‌ನಲ್ಲಿ ಗರಿಷ್ಠ 17 ಮಿ.ಮೀ ಮಳೆ ದಾಖಲಾಗಿದೆ. ಇನ್ನುಳಿದಂತೆ ಮಾಸ್ತಿಕಟ್ಟೆಯಲ್ಲಿ 16 ಮಿ.ಮೀ, ಮಾಣಿಯಲ್ಲಿ 14 ಮಿ.ಮೀ, ಚಕ್ರಾದಲ್ಲಿ 12 ಮಿ.ಮೀ, ಯಡೂರಿನಲ್ಲಿ 10 ಮಿ.ಮೀ ಹಾಗೂ ಸಾವೇಹಕ್ಲುವಿನಲ್ಲಿ 5 ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಒಟ್ಟಾರೆ ಮಳೆಯ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

ಡ್ಯಾಮ್‌ಗಳ ನೀರಿನ ಮಟ್ಟ ಎಷ್ಟಿದೆ?
ಮಾಣಿ ಜಲಾಶಯ
- ಗರಿಷ್ಠ ಮಟ್ಟ: 594.36 ಮೀಟರ್
- ಇಂದಿನ ಜಲಮಟ್ಟ: 574.30 ಮೀಟರ್ (ಕಳೆದ ವರ್ಷ ಇದೇ ದಿನ: 581.34 ಮೀಟರ್)
- ಲಭ್ಯವಿರುವ ನೀರು: 4.965 ಟಿಎಂಸಿ
- ಒಳಹರಿವು: 0 ಕ್ಯೂಸೆಕ್
- ಹೊರಹರಿವು: 550 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ 468 ಕ್ಯೂಸೆಕ್ ಹಾಗೂ ಸ್ಲೂಯಿಸ್ ಗೇಟ್ ಮೂಲಕ 82 ಕ್ಯೂಸೆಕ್)
ಪಿಕ್‌ಅಪ್ ಜಲಾಶಯ
- ಗರಿಷ್ಠ ಮಟ್ಟ: 563.88 ಮೀಟರ್
- ಇಂದಿನ ಜಲಮಟ್ಟ: 562.26 ಮೀಟರ್ (ಕಳೆದ ವರ್ಷ ಇದೇ ದಿನ: 562.60 ಮೀಟರ್)
- ಲಭ್ಯವಿರುವ ನೀರು: 1.038 ಟಿಎಂಸಿ (73.04%)
- ಒಳಹರಿವು: 973 ಕ್ಯೂಸೆಕ್
- ಹೊರಹರಿವು: 1052 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ)
ಚಕ್ರಾ ಜಲಾಶಯ
- ಗರಿಷ್ಠ ಮಟ್ಟ: 579.12 ಮೀಟರ್
- ಇಂದಿನ ಜಲಮಟ್ಟ: 565.60 ಮೀಟರ್ (ಕಳೆದ ವರ್ಷ ಇದೇ ದಿನ: 571.96 ಮೀಟರ್)
- ಲಭ್ಯವಿರುವ ನೀರು: 0.386 ಟಿಎಂಸಿ (8.23%)
- ಒಳಹರಿವು: 134 ಕ್ಯೂಸೆಕ್
- ಹೊರಹರಿವು: 0 ಕ್ಯೂಸೆಕ್
ಸಾವೇಹಕ್ಲು ಜಲಾಶಯ
- ಗರಿಷ್ಠ ಮಟ್ಟ: 582 ಮೀಟರ್
- ಇಂದಿನ ಜಲಮಟ್ಟ: 572 ಮೀಟರ್ (ಕಳೆದ ವರ್ಷ ಇದೇ ದಿನ: 578.30 ಮೀಟರ್)
- ಲಭ್ಯವಿರುವ ನೀರು: 0.000 ಟಿಎಂಸಿ (0%)
- ಒಳಹರಿವು: 0 ಕ್ಯೂಸೆಕ್
- ಹೊರಹರಿವು: 0 ಕ್ಯೂಸೆಕ್
