ಹೊಸನಗರದಲ್ಲಿ ತಗ್ಗಿದ ಮಳೆ ಅಬ್ಬರ, ಚಕ್ರ, ಸಾವೇಹಕ್ಲುವಿನಿಂದ ನೀರು ಹೊರಕ್ಕೆ, ಎಲ್ಲೆಲ್ಲಿ ಎಷ್ಟಾಗಿದೆ ಮಳೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 JULY 2024

DAM LEVEL : ಹೊಸನಗರ ಭಾಗದಲ್ಲಿ ಮಳೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಜಲಾಶಯದ ಒಳ ಹರಿವು ಪ್ರಮಾಣ ಯಥಾಪ್ರಕಾರ ಮುಂದುವರೆದಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಯಲ್ಲಿ ಹೊಸನಗರ ತಾಲೂಕಿನ ಮಾನಿ ಜಲಾಶಯ ಭಾಗದಲ್ಲಿ 42 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 65 ಮಿ.ಮೀ, ಹುಲಿಕಲ್‌ನಲ್ಲಿ 93 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 86 ಮಿ.ಮೀ, ಚಕ್ರಾದಲ್ಲಿ 110 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 95 ಮಿ.ಮೀ ಮಳೆಯಾಗಿದೆ.

Maani-Dam-in-Hosanagara-Taluk

ಚಾಕ್ರ, ಸಾವೇಹಕ್ಲು ಡ್ಯಾಂನಿಂದ ಹೊರ ಹರಿವು

ಹೊಸನಗರ ತಾಲೂಕಿನ ಮಾನಿ ಜಲಾಶಯದ ಒಳ ಹರಿವು 7525 ಕ್ಯೂಸೆಕ್‌ ಇದೆ. ಪಿಕ್‌ ಅಪ್‌ ಡ್ಯಾಮ್‌ಗೆ 2424 ಕ್ಯೂಸೆಕ್‌ ಒಳ ಹರಿವು ಇದೆ. ಚಕ್ರಾ ಜಲಾಶಯಕ್ಕೆ 2755 ಕ್ಯೂಸೆಕ್‌ ಒಳ ಹರಿವು ಇದೆ. 1681 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಸಾವೇಹಕ್ಲು ಜಲಾಶಯಕ್ಕೆ 2119 ಕ್ಯೂಸೆಕ್‌ ಒಳ ಹರಿವು ಇದೆ. 2044‌ ಕ್ಯೂಸೆಕ್‌ ಹೊರ ಹರಿವು ದಾಖಲಾಗಿದೆ.

ಇದನ್ನೂ ಓದಿ ⇓

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಕುಸಿತ, ಇವತ್ತು ಎಷ್ಟಿದೆ ಒಳ ಹರಿವು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment