ಹೊಸನಗರದಲ್ಲಿ ಮಳೆ ಅಬ್ಬರ, ಯಡೂರಿನಲ್ಲಿ ಎಷ್ಟಾಗಿದೆ ವರ್ಷಧಾರೆ? ಸಾವೇಹಕ್ಲುವಿನಲ್ಲಿ ಹೇಗಿದೆ ಪರಿಸ್ಥಿತಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಹೊಸನಗರ: ತಾಲೂಕಿನಾದ್ಯಂತ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದೆ. ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಾದ ಮಾಣಿ, ಪಿಕ್‌ಅಪ್, ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಏರಿಕೆಯಾಗಿದೆ.

➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಯಲ್ಲಿ ಹೊಸನಗರ ತಾಲೂಕಿನ ವಿವಿಧೆಡೆ ಜೋರು ಮಳೆಯಾಗಿದೆ. ಬಹುತೇಕ ಕಡೆಗಳಲ್ಲಿ ನೂರು ಮಿಲಿ ಮೀಟರ್‌ಗಿಂತಲು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.

Rain-at-Shimoga-Kote-Road

ಮಾಣಿ ಹಾಗೂ ಯಡೂರು ಭಾಗದಲ್ಲಿ ತಲಾ 180 ಮಿ.ಮೀ ಭಾರಿ ಮಳೆ ದಾಖಲಾಗಿದೆ. ಮಾಸ್ತಿಗಟ್ಟೆಯಲ್ಲಿ 152 ಮಿ.ಮೀ, ಹುಲಿಕಲ್‌ನಲ್ಲಿ 145 ಮಿ.ಮೀ, ಸಾವೇಹಕ್ಲುವಿನಲ್ಲಿ 142.0 ಮಿ.ಮೀ ಮಳೆಯಾಗಿದೆ. ಚಕ್ರಾ ಭಾಗದಲ್ಲಿ 123 ಮಿ.ಮೀ ಮಳೆ ದಾಖಲಾಗಿದೆ.

ಜಲಾಶಯಗಳಿಗೆ ಎಷ್ಟಿದೆ ಒಳ ಹರಿವು?

ಮಾಣಿ ಜಲಾಶಯ: ಜಲಾಶಯದ ಇಂದಿನ ಮಟ್ಟ 575.64 ಮೀಟರ್‌ಗಳಾಗಿದ್ದು (ಗರಿಷ್ಠ ಮಟ್ಟ: 594.36 ಮೀ), ಪ್ರಸ್ತುತ 4,360 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಲೈವ್ ಸಾಮರ್ಥ್ಯವು ಶೇ 19.22 ರಷ್ಟಿದೆ.

ಪಿಕ್‌ಅಪ್ ಜಲಾಶಯ: ಇಂದಿನ ಮಟ್ಟ 562.47 ಮೀಟರ್ ತಲುಪಿದ್ದು (ಗರಿಷ್ಠ ಮಟ್ಟ: 563.88 ಮೀ), 1,573 ಕ್ಯೂಸೆಕ್ ಒಳಹರಿವು ಇದೆ. ವಿದ್ಯುತ್ ಉತ್ಪಾದನೆಗಾಗಿ 1,280 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

ಚಕ್ರಾ ಜಲಾಶಯ: ಇಂದಿನ ನೀರಿನ ಮಟ್ಟ 568.24 ಮೀಟರ್ ಆಗಿದ್ದು (ಗರಿಷ್ಠ ಮಟ್ಟ: 579.12 ಮೀ), ಜಲಾಶಯಕ್ಕೆ 1,635 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದೆ.

ಸಾವೇಹಕ್ಲು ಜಲಾಶಯ: ಜಲಾಶಯದ ಇಂದಿನ ಮಟ್ಟ 575.12 ಮೀಟರ್ ಆಗಿದ್ದು (ಗರಿಷ್ಠ ಮಟ್ಟ: 582.00 ಮೀ), ಪ್ರಸ್ತುತ 1,834 ಕ್ಯೂಸೆಕ್ ಒಳಹರಿವು ದಾಖಲಾಗಿದೆ.