ಹೊಸನಗರ ತಾಲ್ಲೂಕಿನಲ್ಲಿ ತುಸು ತಗ್ಗಿದ ಮಳೆ, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

ಹೊಸನಗರ: ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಮೂರ್ನಾಲ್ಕು ದಿನ ಅಬ್ಬರಿಸಿದ್ದ ವರುಣ ಕಳೆದ 24 ಗಂಟೆಯಲ್ಲಿ ಸ್ವಲ್ಪ ತಣ್ಣಗಾಗಿದ್ದಾನೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಸ್ತಿಕಟ್ಟೆ ಭಾಗದಲ್ಲಿ ಅತ್ಯಧಿಕ 126 ಮಿ.ಮೀ ಮಳೆ ದಾಖಲಾಗಿದೆ. ಇನ್ನು, ಚಕ್ರಾ ಜಲಾನಯನ ಪ್ರದೇಶದಲ್ಲಿ 123 ಮಿ.ಮೀ, ಮಾನಿಯಲ್ಲಿ 111 ಮಿ.ಮೀ, ಸಾವೇಹಕ್ಲುವಿನಲ್ಲಿ 108 ಮಿ.ಮೀ, ಹುಲಿಕಲ್‌ನಲ್ಲಿ 93 ಮಿ.ಮೀ ಹಾಗೂ ಯಡೂರಿನಲ್ಲಿ 79 ಮಿ.ಮೀ ಮಳೆ ಸುರಿದಿದೆ.

Maani-Dam-in-Hosanagara-Taluk

ಡ್ಯಾಮ್‌ಗಳ ಒಳ ಹರಿವು ಎಷ್ಟಿದೆ?

ಮಾನಿ ಜಲಾಶಯ: ಜಲಾಶಯದ ಇಂದಿನ ನೀರಿನ ಮಟ್ಟ 577.48 ಮೀಟರ್ ತಲುಪಿದೆ (ಗರಿಷ್ಠ ಮಟ್ಟ: 594.36 ಮೀ). ಸದ್ಯ ಜಲಾಶಯಕ್ಕೆ 2,993 ಕ್ಯೂಸೆಕ್ ಒಳಹರಿವು ಇದೆ.

ಪಿಕ್‌ಅಪ್ ಜಲಾಶಯ: ಇಂದಿನ ನೀರಿನ ಮಟ್ಟ 562.50 ಮೀಟರ್ ಆಗಿದ್ದು, 1,696 ಕ್ಯೂಸೆಕ್ ಒಳಹರಿವು ಇದೆ. ವಿದ್ಯುತ್ ಉತ್ಪಾದನೆಗಾಗಿ 2,229 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಚಕ್ರಾ ಜಲಾಶಯ: ಜಲಾಶಯದ ಇಂದಿನ ಮಟ್ಟ 570.98 ಮೀಟರ್ ತಲುಪಿದ್ದು, 3,254 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಸಾವೇಹಕ್ಲು ಜಲಾಶಯ: ಇಂದಿನ ನೀರಿನ ಮಟ್ಟ 577.40 ಮೀಟರ್ ಆಗಿದ್ದು, ಪ್ರಸ್ತುತ ಜಲಾಶಯಕ್ಕೆ 1,786 ಕ್ಯೂಸೆಕ್ ಒಳಹರಿವು ಇದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!