ನೀರು ಹಾಯಿಸಲು ತೋಟಕ್ಕೆ ಬಂದ ಮಾಲೀಕನಿಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

ಹೊಸನಗರ: ತೋಟವೊಂದರಲ್ಲಿ ಅಳವಡಿಸಲಾಗಿದ್ದ ಎರಡು ನೀರಿನ ಮೋಟಾರ್‌ಗಳನ್ನು (irrigation pump motors) ಕಳ್ಳತನ ಮಾಡಲಾಗಿದೆ. ಹೊಸನಗರ (Hosanagara) ತಾಲೂಕಿನ ಮಸಗಲ್ ಗ್ರಾಮದಲ್ಲಿ ಘಟನೆ ನಡೆದಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮಸಗಲ್ ಗ್ರಾಮದಲ್ಲಿ ವೆಂಕಟರಮಣ ಅವರ ತಾಯಿಯ ತೋಟವಿದೆ. ಅಲ್ಲಿನ ಬಾವಿಗೆ 2 ಹೆಚ್.ಪಿ ಬೋರ್ ಮೋಟಾರ್ ಹಾಗೂ ಕೆರೆಗೆ 3 ಹೆಚ್.ಪಿ ಸಬ್‌ ಮರ್ಸೇಬಲ್ ಮೋಟಾರ್ ಅಳವಡಿಸಲಾಗಿತ್ತು. ವೆಂಕಟರಮಣ ಅವರು ಮಾಸ್ತಿಕಟ್ಟೆಯಲ್ಲಿ ವಾಸವಿದ್ದು, ವಾರಕ್ಕೆ ಎರಡು ಬಾರಿ ಬಂದು ತೋಟಕ್ಕೆ ನೀರು ಹಾಯಿಸಿ ಹೋಗುತ್ತಿದ್ದರು. ಈಚೆಗೆ ನೀರು ಹಾಯಿಸಲು ವೆಂಕಟರಮಣ ಅವರು ತೋಟಕ್ಕೆ ಬಂದಾಗ ಬಾವಿ ಮತ್ತು ಕೆರೆಯಲ್ಲಿದ್ದ ಎರಡು ಮೋಟಾರ್‌ಗಳು ಕಳುವಾಗಿದ್ದವು.

Hosanagara-Police-Station-Board

Hosanagara Police Station 1

ಅಕ್ಕಪಕ್ಕದ ಮನೆಯವರು ಹಾಗೂ ಊರಿನವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕಳುವಾದ ಮೋಟಾರ್‌ಗಳ ಒಟ್ಟು ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಣಗೆರೆ ಕಟ್ಟೆಯಿಂದ ಮರಳುವಾಗ ಹೊಳೆಹೊನ್ನೂರು ಬಳಿ ಕಾದಿದ್ದ ಜವರಾಯ, ಕುಟುಂಬಕ್ಕೆ ದಿಗ್ಭ್ರಮೆ