ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 23 MAY 2024
HOSANAGARA : ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ KSRTC ಬಸ್‌ನಲ್ಲಿ ಡಿಸೇಲ್ ಖಾಲಿಯಾಗಿ ಮಾರ್ಗ ಮಧ್ಯದಲ್ಲೆ ನಿಂತಿದೆ. ಬುಧವಾರ ಸಂಜೆ ಘಟನೆಯಾಗಿದೆ. ಇದರಿಂದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಪರದಾಡುವಂತಾಯಿತು. ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.
ಹೊಸನಗರ ತಾಲೂಕು ಮಾಸ್ತಿಕಟ್ಟೆ ಬಳಿ ಬಸ್‌ನಲ್ಲಿ ಡಿಸೇಲ್ ಖಾಲಿಯಾಗಿದೆ. ಸಾರಿಗೆ ನಿಗಮ ಡಿಸೇಲ್‌ಗೆ ವ್ಯವಸ್ಥೆ ಮಾಡದಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮಹಿಳೆಯರು, ಮಕ್ಕಳು, ವೃದ್ಧರು ಮಳೆಯಲ್ಲಿ ನಿಂತು ಖಾಸಗಿ ಬಸ್ ಮತ್ತು ಪರ್ಯಾಯ ವ್ಯವಸ್ಥೆಯಲ್ಲಿ ತಮ್ಮೂರಿಗೆ ತೆಲುಪುವಂತಾಯಿತು.
ಇದನ್ನೂ ಓದಿ – ಶಿವಮೊಗ್ಗ – ಆಗುಂಬೆ ಮಾರ್ಗದ ಬಸ್ಸಿನ ಕಂಡಕ್ಟರ್‌ಗೆ ಜೀವ ಬೆದರಿಕೆ
ಈಚೆಗೆ ಮೂರ್ನಾಲ್ಕು ಬಾರಿ ಡಿಸೇಲ್ ಖಾಲಿಯಾಗಿ ಬಸ್ ಮಾರ್ಗ ಮಧ್ಯೆ ನಿಂತಿದೆ. ಸಾರಿಗೆ ನಿಗಮದ ಅಧಿಕಾರಿಗಳ ಉಡಾಫೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.


LATEST NEWS
- ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್

- ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್ ಲಾರಿ, ಇಲ್ಲಿದೆ ಡಿಟೇಲ್ಸ್

- ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

- ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್ ವಾಪಸ್

- ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಪಡೆದ ದಂಪತಿ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





