ಶಿವಮೊಗ್ಗ ಜಿಲ್ಲೆಯ ಮತ್ತೊಂದು ಡ್ಯಾಮ್‌ ಭರ್ತಿ, 7 ವರ್ಷದ ಬಳಿಕ ಗೇಟ್‌ಗಳು ಓಪನ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS
ಹೊನಸಗರ: ಮಾನಿ ಜಲಾಶಯ (DAM) ಭರ್ತಿಯಾಗಿದ್ದು ಕ್ರಸ್ಟ್‌ ಗೇಟುಗಳನ್ನು ಮೇಲೆತ್ತಿ ನೀರು ಹೊರ ಬಿಡಲಾಯಿತು. 37 ವರ್ಷದಲ್ಲಿ ಇದು 5ನೇ ಬಾರಿ ಡ್ಯಾಮ್‌ ಭರ್ತಿಯಾಗಿದೆ.
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಜಲಾಶಯದ ಪೂರ್ಣ ಮಟ್ಟ 594.36 ಮೀಟರ್‌. ಬುಧವಾರ ಬೆಳಗ್ಗೆ ನೀರಿನ ಮಟ್ಟ 594.23 ಮೀಟರ್‌ಗೆ ತಲುಪಿದ ಹಿನ್ನೆಲೆ ಮೂರು ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡಲಾಯಿತು. 2500 ಕ್ಯೂಸೆಕ್‌ ನೀರನ್ನು ಹೊರಗೆ ಹರಿಸಲಾಯಿತು.

5ನೇ ಬಾರಿ ಡ್ಯಾಮ್‌ ಬಿಡುಗಡೆ

Mani-dam-gates-opened-at-hosanagara.

ವಿದ್ಯುತ್‌ ಉತ್ಪಾದನೆಗೆ ಸೀಮಿತವಾಗಿ 1988ರಲ್ಲಿ ಮಾನಿ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯವು 1994, 2006, 2007, 2018ರಲ್ಲಿ ಭರ್ತಿ ಆಗಿ, ನೀರು ಹೊರ ಬಿಡಲಾಗಿತ್ತು. ಏಳು ವರ್ಷದ ಬಳಿಕ ಪುನಃ ಜಲಾಶಯ ತುಂಬಿದ್ದು, ನೀರು ಹೊರ ಬಿಡಲಾಗಿದೆ. ಮೇ 15ರ ನಂತರ ನಿರಂತರ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ.

Mani-dam-gates-opened-at-hosanagara.

Mani-dam-gates-opened-at-hosanagara.

ಇದನ್ನೂ ಓದಿ » ದಸರಾ ಹಬ್ಬ, ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲುಗಳು ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ?

Prashanth-Loan-Advertisement.

Mani DAM gates opened

Leave a Comment