ಹಸಿರುಮಕ್ಕಿ ಸೇತುವೆ, ಕಾಮಗಾರಿ ಪರಿಶೀಲಿಸಿದ ಎಂಎಲ್‌ಎ, ಉದ್ಘಾಟನೆ ಯಾವಾಗ?

ಹಸಿರುಮಕ್ಕಿ ಸೇತುವೆ, ಕಾಮಗಾರಿ ಪರಿಶೀಲಿಸಿದ ಎಂಎಲ್‌ಎ, ಉದ್ಘಾಟನೆ ಯಾವಾಗ?

ಹೊಸನಗರ: ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಕಾಮಗಾರಿಯ ಪ್ರಗತಿಯ ವಿವರ ಪಡೆದ ಅವರು, ಕಾಮಗಾರಿ ಮತ್ತಷ್ಟು ಚುರುಕುಗಳಿಸುವಂತೆ ಸೂಚಿಸಿದರು.

MLA-Beluru-Gopalakrishna-Visits-Hasirumakki-Bridge-in-Hosanagara

ನಂತರ ಸುದ್ದಿಗಾರರೊಂದಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿರು. ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌.

POINT-1

ಸೇತುವೆ ಕಾಮಗಾರಿ ಭಾಗಶಃ ಮುಕ್ತಾಯಗೊಂಡಿದೆ. ಅಂತಿಮ ಹಂತದ ಕೆಲಸ ಬಾಕಿಯಿವೆ. ಇನ್ನು ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ದೀಪಾವಳಿ ವೇಳೆಗೆ ಸೇತುವೆ ಉದ್ಘಾಟಿಸಲಾಗುವುದು. ಇದು ಸಂತ್ರಸ್ತರಿಗೆ ಹಬ್ಬದ ಉಡುಗೊರೆಯಾಗಲಿದೆ.

POINT-2

ಈ ಭಾಗದ ಜನರು ಹಲವು ದಶಕಗಳಿಂದ ಸೇತುವೆಗಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಪೇಂಟಿಂಗ್ ಹಾಗೂ ಸೇತುವೆಯ ಇಕ್ಕೆಲಗಳ ರಸ್ತೆ ನಿರ್ಮಾಣ ಕಾರ್ಯ ಬಾಕಿಯಿದೆ. ಕಾಮಗಾರಿಗೆ ಚುರುಕು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾವು ಶಾಸಕರಾಗಿ ಅಧಿಕಾರ ವಹಿಸಿಕೊಂಡ ನಂತರ ಹಸಿರುಮಕ್ಕಿ ಸೇತುವೆ ಕಾಮಗಾರಿಗೆ ಯಾವುದೇ ರೀತಿಯ ಅನುದಾನದ ಕೊರತೆಯಾಗದಂತೆ ಜಾಗ್ರತೆ ವಹಿಸಲಾಗಿದೆ.

POINT-3

ಹಸಿರುಮಕ್ಕಿ ಸೇತುವೆಗೆ ಕಾಗೋಡು ತಿಮ್ಮಪ್ಪ ಅವರು ಅನುದಾನ ನೀಡಿದ್ದರು. ಸಿಗಂದೂರು ಸೇತುವೆಗೆ ಬಿ.ಎಸ್. ಯಡಿಯೂರಪ್ಪ ಅನುದಾನ ನೀಡಿದ್ದರು. ಸಿಗಂದೂರು ಸೇತುವೆಯ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಿಗಲಿ ಎಂಬ ಉದ್ದೇಶದಿಂದ ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ಹಿಂದೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿತ್ತು. ಇಲ್ಲದಿದ್ದರೆ ಸಿಗಂದೂರು ಸೇತುವೆಗಿಂತ ಮುಂಚೆಯೇ ಇದು ಉದ್ಘಾಟನೆಯಾಗಬೇಕಿತ್ತು.

ಸೇತುವೆ ಪರಿಶೀಲನೆ ವೇಳೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ, ಮುಖಂಡರಾದ ಸಣ್ಣಕ್ಕಿ ಮಂಜು, ಸುಧೀಂದ್ರ ಗೌಡ, ಗೋಫಿನಾಥ್, ವಕೀಲ ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.