ರಾಘವೇ‍ಶ್ವರ ಶ್ರೀ ಪುರ ಪ್ರವೇಶ | ಹೊಸಗುಂದಕ್ಕೆ ಶೃಂಗೇರಿ ಶ್ರೀ | ಮಲ್ಲಾಪುರದಲ್ಲಿ ದೊಡ್ಡ ರಥೋತ್ಸವ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 APRIL 2024

ಪುರ ಪ್ರವೇಶಿಸಿದ ರಾಘವೇಶ್ವರ ಶ್ರೀ

HOSANAGARA : ರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪುರ ಪ್ರವೇಶ ಮಾಡಿದರು. ಹೊಸನಗರದ ಹೊರವಲಯದ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನ ಬಳಿ ಸ್ವಾಮೀಜಿಯ‌ನ್ನು ಭಕ್ತರು ಸ್ವಾಗತಿಸಿದರು. ತೆರೆದ ರಥದಲ್ಲಿ ಮೆರವಣಿಗೆ ನಡೆಯಿತು. ನಂತರ ರಾಮಚಂದ್ರಪುರ ಮಠಕ್ಕೆ ತೆರಳಿದರು.

ಬಸವೇಶ್ವರ ದೇವರ ದೊಡ್ಡ ರಥೋತ್ಸವ

ANAVATTI : ಸೊರಬ ತಾಲೂಕು ಆನವಟ್ಟಿ ಸಮೀಪದ ಮಲ್ಲಾಪುರ ಗ್ರಾಮದ ಬಸವೇಶ್ವರ ದೇವರ ದಡ್ಡ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ದೊಡ್ಡ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿದರು.

ಹೊಸಗುಂದಕ್ಕೆ ಶೃಂಗೇರಿ ಶ್ರೀ

SAGARA : ಹೊಸಗುಂದ ಗ್ರಾಮದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಏ. 18ರಂದು ಮಹಾರುದ್ರ ಹವನದ ಪೂರ್ಣಾಹುತಿ ಹಾಗೂ ಬಾಲಾಲಯದಲ್ಲಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ ಎಂದು ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್. ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏ.18ರಂದು ಬೆಳಿಗ್ಗೆ 11.30ಕ್ಕೆ ಶೃಂಗೇರಿ ಕ್ಷೇತ್ರದ ವಿಧುಶೇಖರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತ್ತಷ್ಟು ಹೆಚ್ಚಲಿದೆ ತಾಪಮಾನ, ಇವತ್ತು ಇಡೀ ದಿನ ಎಷ್ಟಿರುತ್ತೆ ಉಷ್ಣಾಂಶ? ಇಲ್ಲಿದೆ ರಿಪೋರ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 16, 2024

Leave a Comment