ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
HOSANAGARA : ಶ್ರೀ ರಾಮಚಂದ್ರಾಪುರ ಮಠದಲ್ಲಿ ಇಂದಿನಿಂದ ರಾಮೋತ್ಸವ ಆರಂಭವಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ. ಪೀಠಾಧಿಪತಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಮೋತ್ಸವದ ವಿಶೇಷ ಧಾರ್ಮಿಕ ಮತ್ತು ಸಾಂಸ್ಕ್ರೃತಿಕ ಕಾರ್ಯಕ್ರಮಗಳು ನಡೆಯಲಿವೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರಾಮಾಯಣ ಪಾರಾಯಣದೊಂದಿಗೆ ಚಾಲನೆ
ಈಗಾಗಲೇ ಏ.9 ರಂದು ವಾಲ್ಮೀಕಿ ರಾಮಾಯಣ ಪಾರಾಯಣದೊಂದಿಗೆ ರಾಮೋತ್ಸವಕ್ಕೆ ಚಾಲನೆ ನೀಡಲಾಗಿದೆ. ಏ. 19 ರವರೆಗೆ ನಡೆಯಲಿದೆ. ಏ. 15ರಂದು ರಾಘವೇಶ್ವರಭಾರತೀ ಶ್ರೀ ಪುರಪ್ರವೇಶ ಜರುಗಲಿದೆ. ಸಂಜೆ ದೀಪ ಮಾಲಿಕೆ ಕಾರ್ಯಕ್ರಮ ನಡೆಯಲಿದೆ. ಏ.16ರಂದು ಅಖಂಡ ಭಜನೆ, ಪೂಗ ಪೂಜೆ ಮತ್ತು ಪುಷ್ಪ ರಥೋತ್ಸವ, ರಾತ್ರಿ 8 ಗಂಟೆಗೆ ಮಾರುತಿ ಪ್ರತಾಪ ಯಕ್ಷಗಾನ ಆಯೋಜಿಸಲಾಗಿದೆ.
ಏ. 17ರಂದು ರಾಮಜನ್ಮೋತ್ಸವ, ಸೀತಾಕಲ್ಯಾಣೋತ್ಸವ, ರಾಮಲೀಲಾ ಕಾರ್ಯಕ್ರಮ ಮತ್ತು ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಏ.18 ರಂದು ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಭಜನಾಮಂಗಲ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ. ಅಂದು ರಾವಣ ದಹನ ಮಾಡಲಾಗುತ್ತದೆ. ಈ ಬಾರಿ 20 ಕೈಗಳ ರಾವಣನ ದಹನಕ್ಕೆ ವ್ಯವಸ್ಥೆಯಾಗಿದೆ. ಏ.19ರಂದು ಅಂಕುರ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ರಾಮೋತ್ಸವ ಸೇವಾ ಸಮಿತಿ ಅಧ್ಯಕ್ಷ ಸೀತಾರಾಮ ಶಿವಮೊಗ್ಗ ತಿಳಿಸಿದ್ದಾರೆ.
ಇದನ್ನೂ ಓದಿ – ಶಕ್ತಿ ದೇವತೆ ಸಮ್ಮುಖದಲ್ಲಿ ಬಿ.ಫಾರಂಗೆ ಪೂಜೆ, ಇವತ್ತು ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ