ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 18 JANUARY 2023
RIPPONPETE | ಸಾಮಾಜಿಕ ಜಾಲತಾಣದಲ್ಲಿ ನಿಷೇಧಿತ ಪಿಐಎಫ್ (PFI) ಸಂಘಟನೆ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಆರೋಪ ಸಂಬಂಧ ಓರ್ವ ಯುವಕನನ್ನು ಬಂಧಿಸಲಾಗಿದೆ. ಕೆಳದ ತಿಂಗಳು ಇನ್ಸ್ಟಾಗ್ರಾಮ್ (INSTAGRAM) ಮೂಲಕ ವಾರ್ನಿಂಗ್ ಎಂದು ಸಂದೇಶ ಕಳುಹಿಸಿದ್ದ.
ಕೆಂಚನಾಲ (KENCHANALA) ಗ್ರಾಮದ ಸುಮಂತ್ ಎಂಬಾತನಿಗೆ ಇನ್ಸ್ಟಾಗ್ರಾಮ್ (INSTAGRAM) ಮೂಲಕ ಬೆದರಿಕೆ ಒಡ್ಡಲಾಗಿತ್ತು. ಡಿ.12ರಂದು ಇನ್ಸ್ಟಾಗ್ರಾಮ್ ನೋಡುತ್ತಿದ್ದಾಗ ಬೆದರಿಕೆ ಮೆಸೇಜ್ ಕಳುಹಿಸಿರುವುದು ಗೊತ್ತಾಗಿದೆ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಸಾಗರ (SAGARA) ತಾಲೂಕಿನ ಜಾವೇದ್ ಅಹಮ್ಮದ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ‘ಒನ್ಲಿ ಪಿಎಫ್ಐ’ ಎಂಬ ಖಾತೆಯ ಮೂಲಕ ಸುಮಂತ್ ಗೆ ಬೆದರಿಕೆ ಒಡ್ಡಿದ್ದ.

ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?
ಹೊಸನಗರ ಸಿಪಿಐ ಗಿರೀಶ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ, ಸಿಬ್ಬಂದಿ ಶಿವಕುಮಾರ್ ನಾಯ್ಕ್, ರಾಮಚಂದ್ರ, ಇಂದ್ರೇಶ್, ಉಮೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು


CLICK HERE TO JOIN SHIVAMOGGA LIVE WHATSAPP GROUP



